ಬಂಟ್ವಾಳ: ಫರ್ಲಾ ಚರ್ಚ್ ನಲ್ಲಿ ವಿಶ್ವಶಾಂತಿಗಾಗಿ ವಿಶೇಷ ಉಪವಾಸ ಮತ್ತು ಪ್ರಾರ್ಥನಾ ದಿನ ಆಚರಣೆ

ಬಂಟ್ವಾಳ: CCBI ಯ ಕರೆಯನ್ನು ಸರಿಸಿ ಮಾರ್ಚ್ 13, 2026 ರಂದು ವಿಶ್ವಶಾಂತಿಗಾಗಿ ವಿಶೇಷ ಉಪವಾಸ ಮತ್ತು ಪ್ರಾರ್ಥನಾ ದಿನವನ್ನು ಭಕ್ತಿಪೂರ್ವಕವಾಗಿ ಧರ್ಮಗುರುಗಳಾದ ವಂ. ಅರುಣ್ ಮಾರ್ಕ್ ಡಿಸೋಜರವರ ಮಾರ್ಗದರ್ಶನದಲ್ಲಿ ಆಚರಿಸಲಾಯಿತು. ಬೆಳಿಗ್ಗೆ 7:00 ಗಂಟೆಯಿಂದಲೇ ಭಕ್ತರು ಒಗ್ಗೂಡಿ ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥನೆ ಸಲ್ಲಿಸಿದರು.

ಈ ದಿನದ ಆಚರಣೆಯಲ್ಲಿ ನಿರಂತರ, ಪರಮ ಪ್ರಸಾದರ ಆರಾದನೆ, ಪವಿತ್ರ ಜಪಮಾಲೆಯ ಪಠಣ ಹಾಗೂ ವೆಲಂಕಣಿ ಮಾತೆಯವರ ಗೌರವಾರ್ಥ ನೊವೆನಾ ಪ್ರಾರ್ಥನೆಗಳನ್ನು ನಡೆಸಲಾಯಿತು. ವಿಶ್ವದ ವಿವಿಧ ದೇಶಗಳಲ್ಲಿ ಶಾಂತಿ ಸ್ಥಾಪನೆಯಾಗಲೆಂದು ಹಾಗೂ ಸಂಕಷ್ಟದಲ್ಲಿರುವ ಪ್ರದೇಶಗಳಿಗೆ ಸೌಹಾರ್ದ ಮತ್ತು ಆರೈಕೆ ದೊರಕಲೆಂದು ಭಕ್ತರು ಬೇಡಿಕೊಂಡರು.

ಚರ್ಚ್ ವ್ಯಾಪ್ತಿಯವಿವಿಧ ವಾರ್ಡ್‌ಗಳು ಹಾಗೂ ಕುಟುಂಬಗಳಿಂದ ಬಂದ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಪವಿತ್ರ ಬಲಿಪೀಠದ ಸನ್ನಿಧಿಯಲ್ಲಿ ಮೌನ ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿದರು. 

ದಿನವಿಡೀ ಚರ್ಚ್ ಭಕ್ತರಿಗೆ ತೆರೆದಿಡಲಾಗಿದ್ದು, ತಮ್ಮ ವೈಯಕ್ತಿಕ ಉದ್ದೇಶಗಳನ್ನು ದೇವರಿಗೆ ಅರ್ಪಿಸಲು ಅವಕಾಶ ನೀಡಲಾಯಿತು. ಇದರಿಂದ ಚರ್ಚ್ ಆವರಣದಲ್ಲಿ ಭಕ್ತಿ, ನಿರೀಕ್ಷೆ ಮತ್ತು ಆಧ್ಯಾತ್ಮಿಕ ಏಕತೆಯ ಗಂಭೀರ ವಾತಾವರಣ ನಿರ್ಮಾಣವಾಯಿತು. ಪ್ರಾರ್ಥನೆಗಳು ವಿಶೇಷವಾಗಿ ಯುದ್ಧಗಳು, ಹಿಂಸಾಚಾರ ಮತ್ತು ವಿಭಜನೆಗಳು ಅಂತ್ಯಗೊಳ್ಳಲೆಂದು ಲಾಯಿತು. ವಿಶ್ವದ ಅಗತ್ಯಗಳನ್ನು ಪವಿತ್ರ ಕನ್ಯಾ ಮೇರಿಯವರ  ಪಾದಕ್ಕೆ ಸಮರ್ಪಿಸಲಾಯಿತು. 

ಸಂಜೆಯ ಸಮಯದಲ್ಲಿ ನಡೆದ ಭವ್ಯ ಮೇಣದ ದೀಪಗಳ ಮೆರವಣಿಗೆ ಈ ದಿನದ ಪ್ರಮುಖ ಆಕರ್ಷಣೆಯಾಗಿತ್ತು.  ಭಕ್ತರು ಕೈಯಲ್ಲಿ ಬೆಳಗಿದ ಮೇಣದ ದೀಪಗಳನ್ನು ಹಿಡಿದು ಮೇರಿಯವರ ಭಕ್ತಿಗೀತೆಗಳನ್ನು ಹಾಡುತ್ತಾ ಶಾಂತಿಗಾಗಿ ಪ್ರಾರ್ಥಿಸುತ್ತ ಮೆರವಣಿಗೆಯಲ್ಲಿ ಭಾಗವಹಿಸಿದರು.

ಮೆರವಣಿಗೆ ಅಂತಿಮ ಆಶೀರ್ವಾದ ಮತ್ತು ಮೇರಿಯವರ ಪಾದಗಳಿಗೆ ಸಮರ್ಪಣೆಯೊಂದಿಗೆ ಸಮಾಪ್ತಿಯಾಯಿತು. ಇದರಿಂದ ಭಕ್ತರು ತಮ್ಮ ದೈನಂದಿನ ಜೀವನದಲ್ಲಿ ಶಾಂತಿಯ ಸಂದೇಶವನ್ನು ಸಾರುವವರಾಗಿರಲೆಂದು ಪ್ರೇರಿತರಾದರು.

ಈ ಅರ್ಥಪೂರ್ಣ ಆಚರಣೆ ಭಾಗವಹಿಸಿದ ಎಲ್ಲರ ಮೇಲೂ ಆಳವಾದ ಆಧ್ಯಾತ್ಮಿಕ ಪ್ರಭಾವ ಬೀರಿತು. ಅವರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿ, ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥಿಸಲು ಮತ್ತು ಶ್ರಮಿಸಲು ಹೊಸ ಸಂಕಲ್ಪವನ್ನು ನೀಡಿತು.

Leave a Reply

Your email address will not be published. Required fields are marked *