ಅತ್ತೂರು, ಕಾರ್ಕಳ: ಸಂತ ಸೆಬಾಸ್ಟಿಯನ್ ಹಬ್ಬದ ಜೊತೆಗೆ ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡುತ್ತಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ–ವೈಸಿಎಸ್ ಯುವ ನಿರ್ದೇಶಕರಾದ ವಂದನೀಯ ಫಾದರ್ ಸ್ಟೀವನ್ ಫರ್ನಾಂಡಿಸ್ ಅವರು ದೀಪ ಬೆಳಗಿಸುವ ಮೂಲಕ ನವದಿನಗಳ ಪ್ರಾರ್ಥನಾ ಮಹೋತ್ಸವವನ್ನು ಉದ್ಘಾಟಿಸಿದರು. ಈ ಮೂಲಕ ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವ 2026ರ ಅಂಗವಾಗಿ ನಡೆಯುವ ಪ್ರಾರ್ಥನಾ ಮಹೋತ್ಸವವು ಇವತ್ತು ಅತ್ತೂರು ಸಂತ ಲೋರೆನ್ಸರ ಬಸಿಲಿಕೆಯಲ್ಲಿ ಪೂಜೆ ವಿಧಾನದೊಂದಿಗೆ ಭಕ್ತಿಪೂರ್ವಕವಾಗಿ ಆರಂಭವಾಯಿತು.



ಈ ಕಾರ್ಯಕ್ರಮದಲ್ಲಿ ಸಂತ ಲೋರೆನ್ಸರ ಪುಣ್ಯಕ್ಷೇತ್ರದ ಅನೇಕ ಭಕ್ತಾದಿಗಳು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಅತ್ತೂರು ಸಂತ ಲೋರೆನ್ಸರ ಪುಣ್ಯಕ್ಷೇತ್ರದ ನಿರ್ದೇಶಕರಾದ ರೆವರೆಂಡ್ ಫಾದರ್ ಆಲ್ಬನ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ರಾಬಿನ್ ಸಾಂತ್ಮಯೆರ್, ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ನಾ, ನೂತನ ಉಪಾಧ್ಯಕ್ಷರಾದ ವಂದೇಶ್ ಮತ್ತಾಯಸ್ ಹಾಗೂ ನೂತನ ಕಾರ್ಯದರ್ಶಿಯಾದ ಮೆಲ್ವಿನ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು.
