ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್
ಮುಂಬಯಿ: ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಸಹಿತ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ಕಳೆದ ಗುರುವಾರ ಚುನಾವಣೆ ನಡೆದಿದ್ದು, ಕಳೆದ ಶುಕ್ರವಾರ ರಾತ್ರಿ ತನಕ ಮತ ಎಣಿಕೆ ನಡೆಸಲ್ಪಟ್ಟಿತು. ಬಿಎಂಸಿ, ನವಿಮುಂಬಯಿ ಮುನ್ಸಿಪಾಲ್ ಕಾರ್ಪೋರೇಶನ್, ಥಾಣೆ ಮುನ್ಸಿಪಾಲ್ ಕಾರ್ಪೋರೇಶನ್, ಮೀರಾ-ಭಯಂದರ್ ಮಹಾನಗರ ಪಾಲಿಕೆ, ಪನ್ವೇಲ್ ಮುನ್ಸಿಪಾಲ್ ಕಾರ್ಪೋರೇಶನ್, ವಸಾಯಿ-ವಿರಾರ್ ಮಹಾನಗರ ಪಾಲಿಕೆ, ಭಿವಂಡಿ ಮುನ್ಸಿಪಾಲ್ ಕಾರ್ಪೋರೇಶನ್, ಕಲ್ಯಾಣ್-ಡೊಂಬಿವಿಲಿ ಮುನ್ಸಿಪಾಲ್ ಕಾರ್ಪೋರೇಶನ್‌ಗಳ ತಡವಾಗಿ ಪ್ರಕಟಿತ ಫಲಿತಾಂಶದಲ್ಲಿ ತುಳು-ಕನ್ನಡ-ಕೊಂಕಣಿ ಭಾಷಿಗ ವಿಜೇತ ಸ್ಪರ್ಧಿಗಳ ವಿವರ ಹೀಗಿದೆ.




ಮೀರಾ-ಭಯಂದರ್ ಮಹಾನಗರ ಪಾಲಿಕೆಯಲ್ಲಿಉಡುಪಿ ಕಣಜಾರು ಗುಡ್ಡೆಯಂಗಡಿ ಮೂಲತಃ ಎಂಬಿಎಂಸಿ ಮಹಾನಗರ ಪಾಲಿಕೆಯ ವಾರ್ಡ್ 19ರಲ್ಲಿ ಕಾಂಗ್ರೇಸ್ (ಐ) ಅಭ್ಯಥಿಯಾಗಿ ಐರಿನ್ ಪಾವ್ಲ್ ಕ್ವಾಡ್ರಸ್ ಪ್ರಚಂಡ ಬಹುಮತದಿಂದ ವಿಜಯಶಾಲಿ ಆಗಿದ್ದಾರೆ.
ವಸಾಯಿ-ವಿರಾರ್ ಮಹಾನಗರ ಪಾಲಿಕೆಯಲ್ಲಿ ಉಡುಪಿ ನಂದಿಕೂರು ದೆಚ್ಚಾರು ಮೂಲತಃ ವಸಾಯಿ ವಿರಾರ್ ಮಹಾನಗರ ಪಾಲಿಕೆಯ ರ್ವಾರ್ಡ್ 28ರಲ್ಲಿ ಬಹುಜನ ವಿಕಾಸ್ ಅಘಾಡಿ ಪಕ್ಷದ ಅಭ್ಯಥಿಯಾಗಿ ಪ್ರವೀಣ್ ಚಿನ್ನಯ ಶೆಟ್ಟಿ (೨೦೨೧ನೇ ಸಾಲಿನಲ್ಲಿನ ಮಾಜಿ ಮಹಾಪೌರ) ವಿಜೇತರಾಗಿದ್ದಾರೆ. ಇವರು ಈ ಬಾರಿ ಆರನೇ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವರು.
ಕಲ್ಯಾಣ್ ಡೊಂಬಿವಿಲಿ ಮಹಾನಗರ ಪಾಲಿಕೆಯಲ್ಲಿ ಉಡುಪಿ ಎರ್ಮಾಳ್ ಮೂಲತಃ ಕಲ್ಯಾಣ್ ಡೊಂಬಿವಿಲಿ ಮಹಾನಗರ ಪಾಲಿಕೆಯಲ್ಲಿ ವಾರ್ಡ್ 19ರಲ್ಲಿ ಶಿವಸೇನೆ (ಏಕ್‌ನಾಥ್ ಶಿಂಧೆ) ಅಭ್ಯಥಿಯಾಗಿ ಮಲ್ಲೇಶ್ ಶಿವಣ್ಣ ಶೆಟ್ಟಿ (ಮಾಜಿ ಕಾರ್ಪೋರೇಟರ್, ಮಾಜಿ ಸ್ಥಾಯಿ ಸಮಿತಿ ಸಭಾಪತಿ) ವಾರ್ಡ್ 11ರಲ್ಲಿ ವಿಜೇತರಾಗಿದ್ದು ಅವರ ಸುಪುತ್ರ ಹರ್ಮೇಶ್ ಮಲ್ಲೇಶ್ ಶೆಟ್ಟಿ ಇದೇ ಪಕ್ಷದ ಅಭ್ಯಥಿಯಾಗಿ ವಿಜೇತರಾಗಿ ತಂದೆ ಮಗನ ದಾರ್ಬಾರ್ ಆರಂಭಗೊಂಡಿದೆ.
