ನವದೆಹಲಿ: ಅಕ್ಟೋಬರ್ 10ರ ಒಳಗೆ ದ್ವಿತೀಯ ಪಿಯುಸಿ ಸಿಬಿಎಸ್ಇ ಫಲಿತಾಂಶವನ್ನು ಪ್ರಕಟಿಸುವುದಾಗಿ ಇಂದು ಸುಪ್ರೀಂಕೋರ್ಟ್‌ಗೆ ಸಿಬಿಎಸ್‌ಇ ಹೇಳಿದೆ.ಫಲಿತಾಂಶದ ಶೀಘ್ರ ಪ್ರಕಟಣೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಪರೀಕ್ಷಾ ಮಂಡಳಿ ಈ ಮಾಹಿತಿ ನೀಡಿದೆ.
ಅಕ್ಟೋಬರ್ 31ರಿಂದ ಪದವಿ ಪೂರ್ವ ಕೋರ್ಸ್‌ಗಳು ಆರಂಭವಾಗಿದೆ. ಅಲ್ಲಿಯ ಒಳಗೆ ಮರು ಪರೀಕ್ಷೆಗೆ ಹಾಜರಾದ ಸುಮಾರು 2 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಹೊರಬರಲಿದೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾಹಿತಿ ನೀಡಿದೆ.
12ನೇ ತರಗತಿ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠವು ಹೇಳಿತು.
ಸಿಬಿಎಸ್‌ಇ ಯು ಪರೀಕ್ಷೆಯ ಫಲಿತಾಂಶಗಳನ್ನು ತ್ವರಿತವಾಗಿ ಪ್ರಕಟಿಸಬೇಕು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಎಲ್ಲ ರೀತಿಯ ಅನುವು ಮಾಡಿಕೊಡಬೇಕು ಎಂದು ಕೋರ್ಟ್ ಹೇಳಿದೆ. ಕರೊನಾದ ಈ ಬಿಕ್ಕಟ್ಟಿನಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿಯೂ ಗಂಭೀರವಾಗಿದೆ. ಆದ್ದರಿಂದ ಅವರಿಗೆ ಎಲ್ಲಾ ರೀತಿಯ ನೆರವು ನೀಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ಕೋರ್ಟ್ ಹೇಳಿದೆ.