ಬೆಂಗಳೂರು:- ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು 1966 ರಲ್ಲಿ ರತ್ನಸಿಂಹ ಶಾಂಡಿಲ್ಯ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಉದ್ಘಾಟನೆಗೊಳ್ಳುವ ಮೂಲಕ ಆರಂಭವಾಯಿತು. 2015 ರಿಂದ ಸಾಹಿತ್ಯಕ ದೃಷ್ಟಿಯಿಂದ ಕರ್ನಾಟಕದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳಲ್ಲಿ ಮುಖ್ಯವೆನಿಸಿದೆಭಾಷೆ ನಾಗರಿಕತೆಯ ಪ್ರತೀಕವಾದರೆ ಸಾಹಿತ್ಯ ಸಂಸ್ಕೃತಿಯ ಪ್ರತಿಬಿಂಬ. ಆತ್ಮಶೋಧನೆಯ ಮೂಲಕ ಸಾಧನೆಗೆ ದಾರಿದೀಪವೆನಿಸಿದ್ದು ಸಾಹಿತ್ಯಓದು ಮನುಷ್ಯನ ಒಳಗೊಬ್ಬ ಸಾಹಸಿಯನ್ನು ಸೃಷ್ಟಿಸುತ್ತದೆ ಆ ಸಾಹಸದಿಂದ ಸಂಸ್ಕೃತಿ ಮತ್ತು ತಾಯ್ಕೆಲದ ರಕ್ಷಣೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಂಘಟನೆಯದ್ದು. ಹೀಗಾಗಿಯೇ ಎಲ್ಲ ಭಾರತೀಯ ಭಾಷೆಗಳ ಒಳಗಿರುವ ಭಾರತೀಯತೆಯನ್ನು ಜಾಗೃತಗೊಳಿಸುವ ಮೂಲಕ ಅವಾಸ್ತವಿಕ ವೈಚಾರಿಕತೆಯನ್ನು ಎದುರಿಸುತ್ತ ಅಖಂಡ ಭಾರತವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತದೆ

   

     ಸಂಘಟನೆಯ ಕಾರ್ಯವ್ಯಾಪ್ತಿಯು ಘಟಕಗಳು ಹಾಗು ಸಮಿತಿಗಳೆಂಬ ರೂಪಗಳಲ್ಲಿ ಕಾರ್ಯನಿರ್ವಹಿಸುತ್ತಿದೆಸಾಹಿತ್ಯಕ ಚಟುವಟಿಕೆಗಳನ್ನು ನಡೆಸುತ್ತಾಸೃಜನಶೀಲತೆಯ ವ್ಯಕ್ತಿ ಹಾಗು ವ್ಯಕ್ತಿತ್ವವನ್ನು, ಸಂವೇದನಾಶೀಲ ಸದೃಢ ಸಮಾಜವನ್ನು ಸೃಷ್ಟಿಸುವ ಗರಿಷ್ಠ 25 ಸದಸ್ಯರನ್ನು ಹೊಂದಿರುವ ಗುಂಪುಗಳು 'ಘಟಕ'ಗಳಾಗಿ ಕಾರ್ಯನಿರ್ವಹಿಸುತ್ತವೆಅಂತೆಯೇಸಾಹಿತ್ಯಕ ಅಪಸವ್ಯಗಳಿಂದ ಮುಕ್ತಗೊಳ್ಳುತ್ತ ಪ್ರಾದೇಶಿಕ ಭಾಷೆ ಹಾಗು ಸಾಹಿತ್ಯ ಸಂಸ್ಕೃತಿಯ ಅಧ್ಯಯನದ ಮುಖಾಂತರ ಓದುಗ ಬರಹಗಾರರ ಕೊಂಡಿಯಂತೆಯೂಭಾರತದ ಭವಿಷ್ಯವೆನಿಸಿದ ಮುಂದಿನ ಪೀಳಿಗೆಯನ್ನು ಸಶಕ್ತ ಭಾರತದ ನಿರ್ಮಾಣ ಕಾರ್ಯದಲ್ಲಿ ಸಿದ್ಧಗೊಳಿಸುವುದು ಸೇರಿದಂತೆ ಸಾಹಿತ್ಯದ ಹಲವಾರು ಕಾರ್ಯಕ್ರಮಗಳ ಆಯೋಜನೆಗಾಗಿ ತಾಲೂಕು, ಜಿಲ್ಲೆ ಹಾಗು ರಾಜ್ಯ ಸಮಿತಿಗಳು ಆಯಾಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ರಸ್ತುತ ಕರ್ನಾಟಕದ ಲ್ಲ ಜಿಲ್ಲೆಗಳಲ್ಲಿ ತನ್ನ ಕಾರ್ಯಯೋಜನೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಚಿಂತಕ, ಕವಿ, ನಾಟಕಕಾರ, ಬಹುಮುಖಿ ವ್ಯಕ್ತಿತ್ವವುಳ್ಳ  ಅಂಬಾತನಯ ಮುದ್ರಾಡಿಯವರನ್ನು ಆರಿಸಲಾಯಿತು

    ಉಪಾಧ್ಯಕ್ಷರುಗಳಾಗಿ ಕಾರ್ಕಳದ ಎಸ್.ವಿ.ಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗು ಕನ್ನಡ ಪ್ರಾಧ್ಯಾಪಕಿಯಾದ ಮಿತ್ರ ಪ್ರಭಾ ಹೆಗಡೆ ಅವರನ್ನು , ಮತ್ತು ಶಿಕ್ಷಣ ತಜ್ಞ ಹಾಗು ರಾಜಕೀಯ ವಿಶ್ಲೇಷಕರು ಆಗಿರುವ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಡಾ.ಪ್ರಜ್ಞಾ ಮಾರ್ಪಳ್ಳಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಾಗಿರುವ ಡಾ. ವಿದ್ಯಾಲತಾ ಇವರನ್ನು ನಿಯುಕ್ತಿ ಗೊಳಿಸಲಾಯಿತು. ದೇ ರೀತಿ ಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಡಾ .ವಿಜಯಲಕ್ಷ್ಮಿ ಎಂ ಅವರನ್ನು ಖಜಾಂಚಿಯಾಗಿ ಅಭಾಸಾಪದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ರಘುನಂದನ್ ಭಟ್ ನರೂರು ಅವರು ಘೋಷಿಸಿದರು. ಲೇಖಕರು ಕವಿಗಳು ಓದುಗರು ಸೇರಿದಂತೆ ಸಾಹಿತ್ಯಾಸಕ್ತ ಬಂಧುಗಳು ಅಭಾಸಾಪದ ಸದಸ್ಯರಾಗಲು ಅರ್ಹರು, ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ