ದಕ್ಷಿಣ ಕನ್ನಡ:- ಮಾಣಿ ವಲಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಇದರ ಜಂಟಿ ಆಶ್ರಯದಲ್ಲಿ ದ್ವಿತೀಯ ಹಂತದ ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೊಂದಾವಣಿ ಶಿಬಿರ ಮತ್ತು ಕಾರ್ಡ್ ವಿತರಣಾ  ಸಮಾರಂಭ ಸೂರಿಕುಮೇರಿನಲ್ಲಿ ಜರಗಿತು.  ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ  ಚಾಲನೆ ನೀಡಿ, ಬಳಿಕ ಫಲಾನುಭವಿಗಳಗೆ ಕಾರ್ಡ್ ವಿತರಿಸಿದರು.

 ಈ ಸಂದರ್ಭದಲ್ಲಿ  ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಕುಶಲ ಪೆರಾಜೆ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಪ್ರಮುಖರಾದ  ವೆಂಕಪ್ಪ ಪೂಜಾರಿ ಪಲ್ಲತ್ತಿಲ, ಹಮೀದ್ ಪಲ್ಕೆ, ಅಬ್ದುಲ್ ಅಜೀಜ್ ಸೂರಿಕುಮೇರು, ಸುಧಾಕರ ಶೆಟ್ಟಿ ಶಂಭುಗ, ಹನೀಫ್ ಸೂರಿಕುಮೇರು, ಹಸನ್ ಸೂರಿಕುಮೇರು, ರಾಮಚಂದ್ರ ಶೆಟ್ಟಿ ನೆಲ್ಲಿ, ಸೂರಿಕುಮೇರು ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಕರೀಂ  ಮೊದಲಾದವರು ಉಪಸ್ಥಿತರಿದ್ದರು.