ಉಡುಪಿ,(ಸೆಪ್ಟೆಂಬರ್, 1): ಆಗಸ್ಟ್ 28ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಐ.ಕ್ಯೂ.ಎ.ಸಿ. ಮತ್ತು ಅರ್ಥಶಾಸ್ತ್ರ ವಿಭಾಗದಿಂದ “Sharing Intellectual Knowledge to NET/SLET Aspirants” ಎನ್ನುವ ಕುರಿತು ಆನ್‌ಲೈನ್ ವೆಬಿನಾರ್ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಮಾಹೆ ಮಣಿಪಾಲ ಕಾಮರ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ನಾಯಕ ಮಾತನಾಡಿ “ಜಗತ್ತು ಎನೇ ತೊಂದರೆಗಳಿದ್ದರೂ ವೇಗವಾಗಿ ಬದಲಾಗುತ್ತಿದೆ. ಶಿಕ್ಷಣ ಕ್ಷೇತ್ರ ಎಲ್ಲದರ ಮಂಚೂಣಿಯಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಾಂಕ್ಷಿಗಳು ವಿವಿಧ ಮೂಲಗಳಿಂದ ಜ್ಞಾನವನ್ನು ಸ್ವೀಕರಿಸಿ ಉಪಯೋಗಿಸಿಕೊಳ್ಳುವುದು ಅನಿವರ‍್ಯವಾಗುತ್ತಿದೆ. ಸಂಶೋಧನೆ, ಎನ್.ಇ.ಟಿ./ಎಸ್.ಎಲ್.ಇ.ಟಿ ಪರೀಕ್ಷೆ ಪಾಸು ಮಾಡುವುದು ಇಂದಿನ ಅಗತ್ಯವೆನ್ನುತ್ತಾ ಎನ್.ಇ.ಟಿ/ಎಸ್.ಎಲ್.ಇ.ಟಿ ಪರೀಕ್ಷೆ ಬಗ್ಗೆ ತಿಳಿ ಹೇಳಿದರು.
ವೆಬಿನಾರ್ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್ ಹೆಗ್ಡೆ ವಹಿಸಿದ್ದು, ಐ.ಕ್ಯೂಎ.ಸಿ ಸಂಯೋಜಕ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್ ಸ್ವಾಗತಿಸಿ, ಶರ್ಮಿಳಾ ಹಾರಾಡಿ ನಿರ್ವಹಿಸಿ ವಂದಿಸಿದರು. ಮೇವಿ ಮಿರಾಂದ ಸಹಕರಿಸಿದರು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿ ಆನ್‌ಲೈನ್ ವೆಬಿನಾರ್ ಪ್ರಯೋಜನ ಪಡೆದರು.