ಗಾಯವಾದರೆ : ತೆಂಗಿನಕಾಯಿ ನೀರನ್ನು ಸಂಗ್ರಹಿಸಿ ಚೆನ್ನಾಗಿ ಮಂದವಾಗುವ ತನಕ ಕುದಿಸಿ.ದಪ್ಪ ಲೇಹ್ಯಪಾಕಕ್ಕೆ ಬಂದಾಗ ಇಳಿಸಿ ತಣಿಸಿ. ಬಾಟಲಿಯಲ್ಲಿರಿಸಿ.ಹಾಳಾಗುವುದಿಲ್ಲ.

ಯಾವದೇ ನವೀನ ಗಾಯಕ್ಕೆ ಲೇಪಿಸಿ.ಅನಂತರ ನೀರು ತಾಗಿಸದಿರಿ.ಗಾಯ ತಾನಾಗಿ ವಾಸಿಯಾಗುತ್ತದೆ.


ಕಾಡುತುಳಸಿಯ ಎಲೆಗಳನ್ನು ಜಜ್ಜಿ ಕಲ್ಕ ತಯಾರುಮಾಡಿ.ಗಾಯದ ಪೂರ್ಣ ಭಾಗ ಆವರಿಸುವಂತೆ ದಪ್ಪನಾಗಿ ಹಚ್ಚಿ.ಒಣಗಲು ಬಿಡಿ.ಆಮೇಲೆ ಕೀಳಬೇಡಿ.ಗಾಯ ಒಣಗಿದೊಡನೆ ತಾನಾಗಿ ಬೀಳುತ್ತದೆ.

ಪಿತ್ತಗಂದೆಗೆ ಮೈಯಲ್ಲಿ ಪಿತ್ತಗಂದೆ (ಬಿಸುರ್ಪು)ಉಂಟಾದರೆ: ಒಳ್ಳೆಕೊಡಿ ಪಂಚಾಂಗ(ಪೂರ್ಣಗಿಡ) ಜಜ್ಜಿ ಪೂರ್ತಿ ಶರೀರಕ್ಕೆ ಹಚ್ಚಿ. ಒಣಗಿದಾಗ ಸ್ನಾನ ಮಾಡಿ ಈಶ್ವರಿ ಬಳ್ಳಿ, ಕೇಪುಳ ಗಿಡ,ಕಹಿಬೇವು ,ಗಂಧ ,ಅರಸಿನ ಸೇರಿಸಿದರೆ ಉತೃಷ್ಟ .ಅದರಲ್ಲೆ ಸ್ನಾನ ಉತ್ತಮ.   ಒಂದು ಚಮಚ ದಷ್ಟು ಎಳ ನೀರಜತೆ ಸೇವನೆ.


ಹುಣ್ಣುಗಳಿಗೆ: ಹೊನ್ನೆಮರದ ಕೆತ್ತೆಗೆ ಅಶ್ವತ್ಥ ಅತ್ತಿ ಆಲ ಕೂಡಾ ಸೇರಿಸಿ ಕಷಾಯ ಮಾಡಿ ತೊಳೆಯುವುದು.ಮತ್ತುಬಿಳಿ  ಸೇವವಿಸುವುದು.# ಮಲ್ಲಗೆ ಗಿಡ ದಾಸವಾಳ ಎಲೆ‌ ಸ್ವಲ್ಪ ಮೈಲುತುತ್ತು ಸೇರಿಸಿ ಎಣ್ಣೆ ಮಾಡಿ ಹಚ್ಚುವುದು.

ತಲೆಹೊಟ್ಟಿಗೆ : ನೊರೆಕಾಯಿ ನೆನೆದು ಲೋಳೆರಸದ ಜತೆ ಸ್ನಾನದಲ್ಲಿ ಬಳಕೆ.


ಸಿಬ್ಬಕ್ಕೆ : ಕಲ್ಲುಶುಂಠಿ ಗಡ್ಡೆಯನ್ನು ಜಜ್ಜಿ ಸಂಪೂರ್ಣ ಶರೀರ ಲೇಪನ.ನಂತರ ಸ್ನಾನ. ೩ ದಿನ ಸಾಕು.

ವಾಂತಿಗೆ:ಎಲಕ್ಕಿ ಜಜ್ಜಿ ನೀರಿನಲ್ಲಿ ಹಾಕಿ ಆಗಾಗ ಚಮಚದಷ್ಟು ಸೇವಿಸಿ.


ಉಗುರುಸುತ್ತಿಗೆ :ಕೆಸುವಿನ ಟೋಪಿ ಹಾಕಿ.


ಬಾಯಿಹುಣ್ಣಿಗೆ : ಬಸಳೆ ಚೀಪುವುದು: ಅತ್ತಹಹಾಕಿದ ಅನ್ನ: ಪೇಳೆ ಚಿಗುರು ಸೇವನೆ.: ಜೇನು ಉತ್ತಮ.


ಡಾ ಸುರೇಶ ನೆಗಳಗುಳಿ

ಸುಹಾಸ ಕ್ಲಿನಿಕ್

ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ

ಮಂಗಳೂರು ೭

Any Health Queries Contact : pingaara@gmail.com.