ಭಾರತದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಹಾಗೂ ಮಹಿಳಾ ಶಿಕ್ಷಣದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನವನ್ನು ಗೌರವ ಹಾಗೂ ಅಭಿಮಾನದಿಂದ ಪಡಿ ಕಛೇರಿಯಲ್ಲಿ ಆಚರಿಸಲಾಯಿತು.
ಸಾವಿತ್ರಿಬಾಯಿ ಪುಲೆ ಅವರು 19ನೇ ಶತಮಾನದಲ್ಲೇ ಮಹಿಳೆಯರ ಶಿಕ್ಷಣ, ದಲಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾನ್ ಚೇತನ. ಸಾಮಾಜಿಕ ಅಸಮಾನತೆ, ಅಂಧಶ್ರದ್ಧೆ ಹಾಗೂ ಲಿಂಗಭೇದದ ವಿರುದ್ಧ ಧೈರ್ಯವಾಗಿ ನಿಂತ ಅವರು, ಶಿಕ್ಷಣವೇ ಸಮಾಜ ಪರಿವರ್ತನೆಯ ಶಕ್ತಿಯೆಂದು ನಂಬಿದ್ದರು.
ಅನೇಕ ವಿರೋಧಗಳು ಮತ್ತು ಅವಮಾನಗಳನ್ನು ಎದುರಿಸಿದರೂ, ಅವರು ತಮ್ಮ ಧ್ಯೇಯದಿಂದ ಹಿಂದೆ ಸರಿಯಲಿಲ್ಲ. ಇಂದಿನ ದಿನದಲ್ಲಿ, ಅವರ ಜೀವನ ಮತ್ತು ಕಾರ್ಯಗಳು ಯುವ ಪೀಳಿಗೆಗೆ ಶಿಕ್ಷಕರಿಗೆ ಪ್ರೇರಣೆಯಾಗಿದ್ದು, ಸಮಾನತೆ,
ನ್ಯಾಯ ಮತ್ತು ಶಿಕ್ಷಣದ ಮಹತ್ವವನ್ನು ನೆನಪಿಸುತ್ತವೆ. ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಶಿಕ್ಷಣದ ಮೂಲಕ ಸಮಾನ ಹಾಗೂ ಪ್ರಗತಿಶೀಲ ಸಮಾಜ ನಿರ್ಮಿಸುವ ಸಂಕಲ್ಪವನ್ನು ನಾವು ಎಲ್ಲರೂ ಕೈಗೊಳ್ಳಬೇಕಾಗಿದೆ. ಎಂದ ರೆನ್ನಿ ಡಿಸೋಜ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ ದ.ಕ ಜಿಲ್ಲೆ.
ಈ ಸಂದರ್ಭದಲ್ಲಿ ಭಾಗವಹಿಸಿದ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಸಂಚಲನ ಸಮಿತಿಯ ಅಧ್ಯಕ್ಷರಾದ ಸುನೀತಾ, ಸದಸ್ಯರಾದ ಪ್ರೇಮಿ ಫೆರ್ನಾಂಢೀಸ್, ಪ್ರಮೀಳಾ, ಸಮಾಜ ಸೇವಕಿ, ಆಶಾಲತಾ, ಪ್ಯಾರ ಲೀಗಲ್ ಸದಸ್ಯರಾದ ಹರ್ಷಿತಾ, ಪಡಿ ಸಂಸ್ಥೆಯ ಸಿಬಂಧಿ ವರ್ಗದವರು ಮತ್ತು ಮತ್ತಿತರು ಉಪಸ್ಥಿತಿ ಇದ್ದರು.
ಕಾರ್ಯಕ್ರಮದ ಸ್ವಾಗತ ವಿವೇಕ, ಸುನೀತಾ ಧನ್ಯವಾಧಿಸಿದರು.
ಸಭೆಯಲ್ಲಿ ಚರ್ಚಿಸಿದಂತೆ, 1. ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನವನ್ನು, ಕರ್ನಾಟಕ ಸರಕಾರ ಶಿಕ್ಷಕಿಯರ ದಿನಾಚರಣೆಯನ್ನಾಗಿ ಮಾಡಬೇಕು ಎಂದು ನಿರ್ಣಯಿಸಲಾಯಿತತು.
2. ಸಾವಿತ್ರಿ ಬಾಯಿ ಪುಲೆಯವರು ನೀಡಿದ ಸಾಮಾಜಿಕ ನ್ಯಾಯ ಲಿಂಗ ಸಮಾನತೆ ಹಾಗೂ ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ವಿಶೇಷವಾದ ತರಬೇತಿ ನೀಡಬೇಕು.
3. ಶಾಲಾ ಪಠ್ಯದಲ್ಲಿ ಮಕ್ಕಳಿಗೆ, ಸಾವಿತ್ರಿಬಾಯಿ ಬಾಯಿ ಪುಲೆಯವರು ನೀಡಿದ ಸಾಮಾಜಿಕ ನ್ಯಾಯ ಲಿಂಗ ಸಮಾನತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪಠ್ಯವನ್ನು ಸೇರಿಸಿಕೊಳ್ಳಬೇಕು.
4. ಡಿ.ಎಡ್ ಮತ್ತು ಬಿ.ಎಡ್ ಶಿಕ್ಷಣದಲ್ಲಿ ಸಾವಿತ್ರಿ ಬಾಯಿ ಪುಲೆಯವರ ಶಿಕ್ಷಕ ವೃತ್ತಿಯ ಬಗ್ಗೆ ತರಬೇತಿಯಲ್ಲಿ ಅಳವಡಿಸಬೇಕು.
5. ಅವರ ಜನುಮದಿನದಂದು ಮತ್ತು ಪುಣ್ಯದಿನದಂದು, ಶಾಲೆಯ ಎಸೆಂಬ್ಲಿಯಲ್ಲಿ ಅವರ ಬಗ್ಗೆ ಸ್ಮರಣೆ ಮಾಡುವ ಕುರಿತು ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಬೇಕು.
ಈ ಜನ್ಮದಿನದ ಸಂದರ್ಭದಲ್ಲಿ, ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಶ್ರಮಿಸುವುದೇ ಅವರಿಗೆ ಸಲ್ಲುವ ನಿಜವಾದ ಗೌರವವಾಗಿದೆ.