ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆಯ ಸ್ಕೈ ಪೇಂಟ್ಸ ಸಂಸ್ಥೆಯವರು ಇದೇ ಬರುವ ಜನವರಿ 11ರಂದು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಅತಿ ಅಪರೂಪದ ವಿಶೇಷ ತ್ರಿವಳಿ ವಾಯಲಿನ ವಾದನ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಯೋಜಿಸಿರುತ್ತಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ವೈಲಿನ್ ವಾದಕ ಆಕಾಶವಾಣಿಯ ಉನ್ನತ ಶ್ರೇಣಿಯ, ಕಲಾ ಶ್ರೀ ಪುರಸ್ಕೃತ ಸಹೋದರ ಸಹೋದರಿಯರಾದ ತಿರುವನಂತಪುರಂ ಎಸ್ಆರ್ ಮಹಾದೇವ ಶರ್ಮ ಹಾಗೂ ರಾಜಶ್ರೀ ಮತ್ತು ಯುವ ಪ್ರತಿಭೆ ಮಾಸ್ಟರ್ ಜಿಆರ್ ವೈದ್ಯನಾಥ ಶರ್ಮ ಅವರು ವಾಯ್ಲೆನ್ ಕಚೇರಿಯನ್ನು ನೀಡಲಿದ್ದಾರೆ. ಇವರು ಹೆಸರಾಂತ ಜೇಸುದಾಸ್ ಮತ್ತು ಕದ್ರಿ ಗೋಪಾಲನಾಥ್ ಅವರುಗಳಿಗೆ ಸಾಥ್ ಕೊಟ್ಟವರು. ಅಲ್ಲದೆ ತಮಿಳು ಮಲಯಾಳ ಇತ್ಯಾದಿ ಚಿತ್ರಗಳಿಗೂ ಕೂಡ ಸಂಗೀತ ಹಿನ್ನೆಲೆಯನ್ನು ನೀಡಿದವರು. 

ಇವರೊಂದಿಗೆ ಮೃದಂಗದಲ್ಲಿ ಡಾ.ಕೆ ಜಯಕೃಷ್ಣನ್ ತ್ರಿಚೂರು, ಘಟಂನಲ್ಲಿ ವೆಲ್ನ್ ತಂಜೂರು ಶ್ರೀಜಿತ್ ಅವರು ಸಹಕರಿಸಲಿದ್ದಾರೆ. ಎಲ್ಲ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದೆ ಎಂದು ಸಂಸ್ಥೆಯ ಮಾಲೀಕ ಶೈಲೇಂದ್ರ ಕುಮಾರ್ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಯತಿರಾಜ್ ಹಾಜರಿದ್ದರು.