ಯೋಧನಾಗಿ ಮೂಡಬೇಕುಗಡಿಯಕಾಯಲು..
ಕೆಚ್ಚಿನಿಂದಕಾದಬೇಕು ಸಮರಗೆಲ್ಲಲು..
ದೈರ್ಯದಿಂದ ತೊಡೆಯಬೇಕು ಸೆರೆಯ ಕ್ಷಾಮವ..
ಸಾವಿನಲ್ಲುಸವಿಯಬೇಕುರಾಷ್ಟ್ರಪ್ರೇಮವ..
ರೈತನಾಗಿಜನಿಸಬೇಕು ಹಸಿರ ಸಿರಿಯಲಿ..
ದೈತ್ಯನಾಗಿಬೆಳೆಯಬೇಕುಕೃಷಿಯಕಡಲಲಿ..
ತಾಯಿಯಂತೆತುತ್ತನೀಡು ಜಗದ ಜೀವಿಗೆ..
ನಿನ್ನ ಸೇವೆಸಲ್ಲಬೇಕು ಈ ಪುಣ್ಯಭೂಮಿಗೆ..
ಗುರುವಾಗಿಮಾಡಬೇಕುಪಾಠಬೋಧನೆ..
ಒಳ್ಳೆತನದಿಅರಿಯಬೇಕುಮನದವೇದನೆ..
ಎಂದೆಂದಿಗೂಮಾಡದಿರುಪರರನಿಂದನೆ ..
ಜಗವೆಹಾಡಿಹೊಗಳುವುದುನಿನ್ನಸಾಧನೆ..
ವೈದ್ಯನಾಗಿಗಮನನೀಡುರೋಗಿ ಸೇವೆಗೆ..
ದೇವರಂತೆಕಾಣುನೀನುಅವರಪಾಲಿಗೆ..
ನ್ಯಾಯ-ನೀತಿ-ಧರ್ಮದಿಂದಮಾಡುಕಾಯಕ..
ಆಗಬಲ್ಲೆಗಾಂಧಿಯಂತಮೇರು ನಾಯಕ..
ನಯನ್ ಕುಮಾರ್
ಅಂತಿಮ ಬಿಎ, ವಿಶ್ವವಿದ್ಯಾನಿಲಯಕಾಲೇಜು ಮಂಗಳೂರು