ಉಜಿರೆ: ಲಾಕ್ ಡೌನ್ ನಿಂದಾಗಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಜೂನ್‌ ಒಂದರಿಂದ (ಸೋಮವಾರ ) ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಧಮಾ೯ಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸರ್ಕಾರದ ನಿಯಮಾವಳಿಗಳನ್ನುಪಾಲಿಸುವುದರ ಜೊತೆಗೆ ಧರ್ಮಸ್ಥಳದ ವತಿಯಿಂದ ಕೊರೊನಾ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುವುದು. ಕೊರೊನಾ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ವಸತಿ ವ್ಯವಸ್ಥೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ಒಳಗೊಂಡಂತೆ ಭಕ್ತರ ಸಂಖ್ಯೆಯಲ್ಲಿ ನಿಯಂತ್ರಣ ಇಟ್ಟುಕೊಳ್ಳಲಾಗುವುದು. ದೇವರ ದರ್ಶನದ ಸಮಯ ಬೆಳಗ್ಗೆ ಗಂಟೆ 6 ರಿಂದ ಮಧ್ಯಾನ್ನ 1 ಗಂಟೆಯವರೆಗೆ. ಸಂಜೆಗಂಟೆ 5 ರಿಂದ ರಾತ್ರಿ 8 ಗಂಟೆವರೆಗೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಲಕ್ಷ್ಮಿನಾರಾಯಣರಾವ್, ಪಾರುಪತ್ಯಗಾರರು.

ಸಂಚಾರಿ ದೂರವಾಣಿ : 9448252508