ಉಡುಪಿ (ಸೆಪ್ಟೆಂಬರ್,24): ಪ್ರಸಕ್ತ ಸಾಲಿನ ರಾಜ್ಯದ ಸರಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಅನ್‌ಲೈನ್ ನಾನ್-ಇಂಟರಾಕ್ಟೀವ್ ಕೌನ್ಸಲಿಂಗ್ ಮೂಲಕ ಎರಡು ವರ್ಷಗಳ ಐ.ಟಿ.ಐ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ / ತಾಂತ್ರಿಕ ವಿಷಯಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರೀ ಸ್ಕೀಂ ರಡಿಯಲ್ಲಿ ೨ ನೇ ವರ್ಷ / ೩ ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆಪ್ಟಂಬರ್ ೨೮ ರಿಂದ ಅಕ್ಟೋಬರ್ ೬ ರ ವರೆಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಯ ಅಧಿಸೂಚನೆಯ ವಿವರಗಳನ್ನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ dtek.karnataka.gov.in ಅಥವಾ dtetech.karnataka.gov.in/kartechnical ನಿಂದ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಥವಾ ಸಮೀಪದ ಸರ್ಕಾರಿ/ ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಭೇಟಿ ನೀಡಿ ಸರ್ಜಿ ಸಲ್ಲಿಸಲು ಹಾಗೂ ಆಪ್ಷನ್ ನ್ನು ಆನ್‌ಲೈನ್‌ನಲ್ಲಿ ದಾಖಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಉಡುಪಿ ಸಂಸ್ಥೆಯ ಪ್ರಾಚಾರ್ಯರ ದೂರವಾಣಿ ಸಂಖ್ಯೆ: ೦೮೨೦-೨೫೭೦೨೪೪ ನ್ನು ಸಂಪರ್ಕಿಸುವoತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.