ಉಡುಪಿ: 2019-20 ನೇ ಶ್ಯೆಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರವೇಶಾತಿಗಾಗಿ ವಿವಿಧ ಕೋರ್ಸ್‍ಗಳಿಗೆ ಆನ್‍ಲ್ಯೆನ್ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಸ್ನಾತಕ ಪದವಿ ಕೋರ್ಸ್‍ಗಳಾದ ಬಿ.ಎ/ಬಿ.ಕಾಂ/ಬಿ.ಲಿಬ್.ಐ.ಎಸ್ಸಿ, ಬಿ.ಇಡಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‍ಗಳಾದ ಎಂ.ಎ/ಎಂ.ಕಾಂ/ಎಂ.ಲಿಬ್.ಐಎಸ್ಸಿ, ಎಂಸ್ಸಿ ಕೋರ್ಸ್‍ಗಳು(ಪ್ರಥಮ ಸಿಮಿಸ್ಟರ್), ಪಿ.ಜಿ. ಡಿಪ್ಲೋಮ, ಡಿಪ್ಲೋಮ, ಸರ್ಟಿಪಿಕೇಟ್, ಹಾಗೂ ಎಂ.ಬಿ.ಎ ಕೋರ್ಸ್‍ಗಳಿಗೆ ಪ್ರವೇಶಾತಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು  KSOU Online Admission Portal ನಲ್ಲಿ ಆನ್‍ಲ್ಯೆನ್ ಮೂಲಕ ಪ್ರವೇಶಾತಿ ಪಡೆದುಕೊಂಡು, ನಂತರ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ಸಂಬಂಧಪಟ್ಟ ದಾಖಲಾತಿ ಸಲ್ಲಿಸಿ ಗುರುತಿನ ಪತ್ರ ಮತ್ತು ಸಿದ್ದಪಾಠಗಳನ್ನು ಪಡೆದುಕೊಳ್ಳಬಹುದು.

ಸದರಿ ಕೋರ್ಸ್‍ಗಳ ಪ್ರವೇಶಾತಿಗೆ 200 ರೂ ದಂಡ ಶುಲ್ಕದೊಂದಿಗೆ ಫೆಬ್ರವರಿ 18 ಮತ್ತು 400 ರೂ ದಂಡ ಶುಲ್ಕದೊಂದಿಗೆ ಫೆಬ್ರವರಿ 29 ಕೊನೆಯ ದಿನವಾಗಿದೆ ಮತ್ತು 2019-20 ನೇ ಸಾಲಿನ ಅಂತಿಮ ಎಂ.ಎಸ್ಸಿ (3 ಮತ್ತು 4ನೇ ಸೆಮಿಸ್ಟರ್) ತರಗತಿಗಳ ಪ್ರವೇಶಾತಿ ನವಿಕರಣವು ದಂಡ ಶುಲ್ಕವಿಲ್ಲದೇ ಫೆಬ್ರವರಿ 25 ಮತ್ತು 200 ರೂ ದಂಡ ಶುಲ್ಕದೊಂದಿಗೆ ಮಾರ್ಚ್ 7 ಕೊನೆಯ ದಿನ.

ಹೆಚ್ಚಿನ ವಿವರಗಳಿಗೆ www.ksoumysuru.ac.in ವೆಬ್‍ಸ್ಯೆಟ್‍ನ್ನು ನೋಡಬಹುದೆಂದು ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕ ಡಾ. ಕೆ.ಪಿ. ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.