ಉಡುಪಿ ಮಾರ್ಚ್ 24 (ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಕರ‍್ಕಳ, ರೋಟರಿ ಕ್ಲಬ್, ಕರ‍್ಕಳ ರಾಕ್ ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಛೇರಿ ಕರ‍್ಕಳದ ಮುಂಭಾಗದಲ್ಲಿ ಧ್ವನಿ-ಬೆಳಕು ಸಂಸ್ಥೆಯವರೊಂದಿಗೆ ಕೊರೊನಾ ವೈರಸ್ ನಿಯಂತ್ರಣದ ಕುರಿತು ಮಾಹಿತಿ ಕರ‍್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೊರೊನಾ ವೈರಸ್ ನಿಯಂತ್ರಣದ ಕುರಿತು ಜಾಗೃತಿ ಕರ‍್ಯಕ್ರಮಕ್ಕೆ ಚಾಲನೆ ನೀಡಿದ  ರಾಜು, ಸಹಾಯಕ ಆಯುಕ್ತರು, ಕುಂದಾಪುರ ಉಪವಿಭಾಗ ಇವರು ಕೊರೊನಾ ಮಹಾಮಾರಿಯನ್ನು ತಡೆಯಬೇಕಿದ್ದರೆ ರ‍್ಕಾರದ ಎಲ್ಲಾ ಮರ‍್ಗಸೂಚಿಗಳನ್ನು ಸರ‍್ವಜನಿಕರು ಕಡ್ಡಾಯವಾಗಿ ಅನುಸರಿಸಬೇಕು, ಹಬ್ಬ ಹರಿದಿನಗಳನ್ನು ಮುಂದಿನ ರ‍್ಷ ಕೂಡ ಆಚರಿಸಬಹುದು ಎಂದರು. ಈ ಕರ‍್ಯಕ್ರಮದಲ್ಲಿ ತೊಡಗಿಸಿಕೊಂಡ ಧ್ವನಿ-ಬೆಳಕು ಸಂಸ್ಥೆಯವರು ನಿಜವಾಗಲೂ ಅಭಿನಂದನರ‍್ಹರು.

 ಕರ‍್ಯಕ್ರಮದಲ್ಲಿ ತಾಲೂಕು ತಹಶೀಲ್ದಾರರಾದ ಪುರಂದರ ಹೆಗ್ಡೆ, ತಾಲೂಕು ಪಂಚಾಯತಿಯ ಕರ‍್ಯನರ‍್ವಹಣಾಧಿಕಾರಿ ಡಾ. ಮೇಜರ್ ರ‍್ಷ, ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಅರಕ್ಷಕ ಇಲಾಖೆಯ ಉಪ ನಿರೀಕ್ಷಕರಾದ ದಾಮೋದರ ಹಾಗೂ ಪುರಸಭಾ ಅಭಿಯಂತರರಾದ ಮದನ್ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಶಿವರಾಮ್ ರಾವ್ ಇವರು ಕರ‍್ಯಕ್ರಮಕ್ಕೆ ಸ್ವಾಗತಿಸಿದರು. ಶೇಖರ್ ಪೂಜಾರಿಯವರು ವಂದಿಸಿದರು