ಉಡುಪಿ ಏಪ್ರಿಲ್ 3 (ಕರ್ನಾಟಕ ವಾರ್ತೆ): ಪ್ರಧಾನ ಮಂತ್ರಿ ಜನಧನ ಖಾತೆ ಹೊಂದಿರುವ  ಮಹಿಳಾ ಖಾತೆದಾರರಿಗೆ  , ಮೂರು ತಿಂಗಳ ಕಾಲ ಪ್ರತಿ ತಿಂಗಳೂ ರೂ.500 ಎಕ್ಸ್‍ಗ್ರೇಷಿಯಾ  ಹಣವನ್ನು ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ  ನೀಡಲಾಗುತ್ತದೆ. ಏಪ್ರಿಲ್ ತಿಂಗಳ ಕಂತು ರೂ.500 ನ್ನು ಸಂಬಂದಿಸಿದ ಬ್ಯಾಂಕುಗಳಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಖಾತೆದಾರರು ಬ್ಯಾಂಕುಗಳಿಂದ ಹಣವನ್ನು  ಡ್ರಾ ಮಾಡಿಕೊಳ್ಳಬಹುದಾಗಿದೆ.

     ಪ್ರಸ್ತುತ ಕೋವಿಡ್ 19 ಹಿನ್ನಲೆಯಲ್ಲಿ  ಬ್ಯಾಂಕುಗಳ ಮುಂದೆ ಏಕಕಾಲಕ್ಕೆ ಜನಸಂದಣಿ ಸೇರುವುದನ್ನು ತಪ್ಪಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಏಪ್ರಿಲ್ 3 ರಿಂದ 9 ರ ವರಗೆ ಈ ಮುಂದಿನ ಸರದಿಯಂತೆ  ಹಣ ಪಡೆದುಕೊಳ್ಳಬಹುದು.

   ಖಾತೆದಾರರ ಅಕೌಂಟ್ ನಂಬರ್ ನ ಕೊನೆಯ ಸಂಖ್ಯೆ 0 ಅಥವಾ 1 ಇರುವವರು ಏಪ್ರಿಲ್ 3 ರಂದು , 2 ಅಥವಾ 3 ಇರುವವರು ಏಪ್ರಿಲ್ 4 ರಂದು , 4 ಅಥವಾ 5 ಇರುವವರು ಏಪ್ರಿಲ್ 7 ರಂದು, 6 ಅಥವಾ 7 ಇರುವವರು ಏಪ್ರಿಲ್ 8 ರಂದು, 8 ಅಥವಾ 9 ಇರುವವರು ಏಪ್ರಿಲ್ 9 ರಂದು ಹಾಗೂ ಏಪ್ರಿಲ್ 9 ರ ನಂತರ ಯಾವುದೇ ಖಾತೆದಾರರು , ಯಾವುದೇ ದಿನದಂದು ಹಣ ಡ್ರಾ ಮಾಡಿಕೊಳ್ಳಲು ಅವಕಾಶವಿದೆ .