ಉಡುಪಿ (ಸೆಪ್ಟೆಂಬರ್, 29): ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಪ್ರಯೋಗ ಶಾಲಾ ತಂತ್ರಜ್ಞರ (42 ಹುದ್ದೆ) ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ (70) ಹುದ್ದೆಯಲ್ಲಿ 6 ತಿಂಗಳ ಅವಧಿಗೆ ಕರ್ತವ್ಯ ನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅಕ್ಟೋಬರ್ 1 ರಿಂದ 5 ರ ವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ, ಅಜ್ಜರಕಾಡು, ಉಡುಪಿ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ , ವಿದ್ಯಾರ್ಹತೆಯ ಮೂಲ ದಾಖಲೆ, ದೃಢೀಕೃತ ದಾಖಲೆ ಮತ್ತು ಭಾವಚಿತ್ರದೊಂದಿಗೆ , ಬೆಳಗ್ಗೆ 11 ರಿಂದ ಸಂಜೆ 3.30 ರ ವರೆಗೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಪ್ರಕಟಣೆ ತಿಳಿಸಿದೆ.