ಉಡುಪಿ,(ಫೆಬ್ರವರಿ 25):  ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರು/ ಅನುಭೋಗದಾರರು ಪ್ರಸಕ್ತ ಸಾಲಿನ ಆಸ್ತಿತೆರಿಗೆಯನ್ನು ಮಾರ್ಚ್ 20 ರ ಅಂತ್ಯದೊಳಗೆ ಪಾವತಿಸಿದ್ದಲ್ಲಿ, ತೆರಿಗೆ ಮೇಲೆ ಶೇ. 5 ರಷ್ಟು ವಿನಾಯಿತಿ ನೀಡಲಾಗುವುದು ಹಾಗೂ ಈಗಾಗಲೇ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ತಿಯಾಗಿ ಪಾವತಿಸಿದ್ದಲ್ಲಿ, ಶೇ. 5 ರ ವಿನಾಯಿತಿ ಮೊತ್ತವನ್ನು ಮುಂಬರುವ ವರ್ಷಗಳ ತೆರಿಗೆ ಪಾವತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

     ಮಾರ್ಚ್ 20 ರ ನಂತರ ಆಸ್ತಿ ತೆರಿಗೆ ಪಾವತಿಸುವ ನಾಗರಿಕರು ಪುರಸಭಾ ಕಾಯ್ದೆಯಂತೆ ಜುಲೈ ತಿಂಗಳಿoದ ಒಟ್ಟು ತೆರಿಗೆಗೆ ಪ್ರತಿ ತಿಂಗಳಿಗೆ ಶೇ. 2 ರಷ್ಟು ದಂಡವನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಆದ್ದರಿಂದ ಆಸ್ತಿ ಮಾಲೀಕರು ಹಾಗೂ ಸಾರ್ವಜನಿಕರು ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.