ಮಂಗಳೂರು,(ಡಿಸೆಂಬರ್ 31):- ಮಂಗಳೂರು ವಿಶ್ವವಿದ್ಯಾನಿಲಯದ ಆವರಣ, ಮಂಗಳಗಂಗೋತ್ರಿಯಲ್ಲಿರುವ ಉದ್ಯೋಗಸ್ಥ ಮಹಿಳೆಯರ ವಸತಿನಿಲಯಕ್ಕೆ ಪ್ರವೇಶ ಪಡೆಯಲು ಉದ್ಯೋಗಸ್ಥ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

   ಪ್ರವೇಶ ಪಡೆಯಲು ಹೊಂದಿರಬೇಕಾದ ಅರ್ಹತೆ ಹಾಗೂ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಸತಿನಿಲಯದ ಕಛೇರಿಯಿಂದ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ ಪಡೆಯಬೇಕೆಂದು ಮಂಗಳಗಂಗೋತ್ರಿ ಉದ್ಯೋಗಸ್ಥ ಮಹಿಳೆಯರ ವಸತಿನಿಲಯದ ನಿಯಮಪಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.