ಮಂಗಳೂರು: ಪ್ರಗತಿಯ ಪಥದಲ್ಲಿ ಹೆಜ್ಜೆ ಹಾಕುತ್ತಿರುವ ಮಂಗಳೂರಿನ ಮಿಲಾಗ್ರಿಸ್ ಕಾಲೇಜು
ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನ ಹೃದಯಭಾಗ ಹಂಪನಕಟ್ಟೆಯಲ್ಲಿ ಸ್ಥಾಪನೆಗೊಂಡ ಮಿಲಾಗ್ರಿಸ್ ವಿದ್ಯಾಸಂಸ್ಥೆಗೆ 170 ವರ್ಷಗಳ ಇತಿಹಾಸವಿದೆ. 2010 ರಲ್ಲಿ ಆರಂಭಗೊಂಡ ಮಿಲಾಗ್ರಿಸ್ ಪದವಿ ಕಾಲೇಜು, ಸಂಸ್ಥೆಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲು.
ಈ ಸಂಸ್ಥೆಯು ಕ್ಯಾಥೊಲಿಕ್ ವಿದ್ಯಾಮಂಡಳಿಯ ಆಡಳಿತಕ್ಕೆ ಒಳಪಟ್ಟಿದ್ದು, ಸ್ಥಳೀಯ ಮಿಲಾಗ್ರಿಸ್ ಚರ್ಚಿನ ಅಧೀನದಲ್ಲಿದೆ. ಜೀವನ ಮೌಲ್ಯಗಳಿಗೆ ಆಧಾರಿತ ಶಿಕ್ಷಣ ಕ್ರಮಗಳನ್ನು ಅಳವಡಿಸಿಕೊಂಡೂ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗುವ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟು ತನ್ನದೇ ಆದ ಪ್ರತ್ಯೇಕತೆಯನ್ನು ಸ್ಥಾಪಿಸಿ ಈ ಶಿಕ್ಷಣ ಸಂಸ್ಥೆಯು ಪ್ರಗತಿಯ ಹೆಜ್ಜೆ ಇಡುತ್ತಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ಒಳಗೊಂಡಿರುವ ಈ ಕಾಲೇಜಿನಲ್ಲಿ ಪ್ರಸ್ತುತ ಬಿ.ಕಾಂ ರೆಗ್ಯುಲರ್, ಬಿ.ಕಾಂ ಎಸಿಸಿಎ, ಬಿ.ಕಾಂ ವಿಧ್ ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಸೈನ್ಸ್, ಬಿ.ಕಾಂ ವಿಧ್ ಟ್ರಾವೆಲ್ ಆ್ಯಂಡ್ ಟೂರಿಸಂ, ಬಿ.ಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ (ಹೋಟೆಲ್ ಮ್ಯಾನೇಜ್‍ಮೆಂಟ್), ಬಿ.ಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ವಿಧ್ ಏವಿಯೇಷನ್, ಬಿ.ಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ವಿಧ್ ಟ್ರಾವೆಲ್ ಆ್ಯಂಡ್ ಟೂರಿಸಂ, ಬಿ.ಎಸ್ಸಿ ಎಫ್.ಎನ್.ಡಿ, ಬಿ.ಎಸ್ಸಿ ಎಫ್.ಎನ್.ಡಿ ವಿಧ್ ಏವಿಯೇಷನ್ ಆ್ಯಂಡ್ ಹಾಸ್ಪಿಟಾಲಿಟಿ ಸೈನ್ಸ್, ಬಿ.ಬಿ.ಎಸ್ಸಿ ಎಫ್.ಎನ್.ಡಿ ವಿಧ್ ಟ್ರಾವೆಲ್ ಆ್ಯಂಡ್ ಟೂರಿಸಂ ಇತ್ಯಾದಿ ಉದ್ಯೋಗ ಆಧಾರಿತ ಕೋರ್ಸುಗಳನ್ನು ಹೊಂದಿಕೊಂಡು ತನ್ನದೇ ಆದ ಛಾಪು ಮೂಡಿಸಿದೆ.
ಆಧುನಿಕ ನಿರ್ಮಾಣ ಕೌಶಲ ಹಾಗೂ ತಾಂತ್ರಿಕ ನೈಪುಣ್ಯತೆಗೆ ನಿದರ್ಶನದಂತಿರುವ ಈ ಕಟ್ಟಡದಲ್ಲಿ ಭವ್ಯ ಸುಸಜ್ಜಿತ ಸಭಾಂಗಣ, ವಾತಾನುಕೂಲಿತ ಸಮಾಲೋಚನಾ ಸಭಾಗೃಹ, ಎಲ್.ಸಿ.ಡಿ ಪ್ರೊಜೆಕ್ಟ್ ರ್ ಸೌಲಭ್ಯ ಹೊಂದಿರುವ ವಿಶಾಲ ತರಗತಿ ಕೊಠಡಿಗಳು, ಗಣಕ ವಿಜ್ಞಾನ ಪ್ರಯೋಗಾಲಯ, ಜಿಮ್ನಾಶಿಯಂ, ವಿಸ್ತಾರವಾದ ಕ್ರೀಡಾ ಮೈದಾನ, ಎಲಿವೇಟರ್ ವ್ಯವಸ್ಥೆ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಲಭ್ಯವಿದೆ.
ಎಕಕಾಲದಲ್ಲಿ ಸುಮಾರು 200 ವಿದ್ಯಾರ್ಥಿಗಳು ಕುಳಿತು ಅಧ್ಯಯನ ಮಾಡಬಹುದಾದ ವಿಶಾಲವಾದ ಹಾಗೂ ಸುವ್ಯವಸ್ಥಿತ ಗ್ರಂಥಾಲಯ ಇಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪರಾಮರ್ಶನ ಗ್ರಂಥಗಳ ಹಲವು ಪ್ರತಿಗಳು ಇಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸೌಲಭ್ಯವನ್ನು ಬಳಸಿಕೊಳ್ಳುವ ಅಪೂರ್ವ ಅವಕಾಶವಿದೆ. ಇ-ಲೈಬ್ರರಿ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಬೇಕಾಗುವ ಮಾಹಿತಿ ಪಡೆದುಕೊಳ್ಳಲು ಉಪಯೋಗವಾಗುತ್ತಿದೆ.
ಹೋಟೆಲ್‍ಮ್ಯಾನೇಜ್‍ಮೆಂಟ್ ಹಾಗೂ ಎಫ್.ಎನ್.ಡಿ. ಕೋರ್ಸುಗಳಿಗೆ ಸಂಬಂಧಪಟ್ಟಂತೆ ಸುಸುಜ್ಜಿತ ಪ್ರಯೋಗಾಲಯಗಳು ಇಲ್ಲಿವೆ. ಪ್ರಯೋಗಶೀಲತೆಯ ಮೂಲಕ ವಿದ್ಯಾರ್ಥಿಗಳು ಅಧ್ಯಯನ ನಡೆಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಎಲ್ಲಾ ಪ್ರಯೋಗಾಲಯಗಳಲ್ಲಿ ಅಗತ್ಯವಿರುವ ಆತ್ಯಾಧುನಿಕ ಸಾಧನೋಪಕರಣಗಳಿದ್ದು, ವಿದ್ಯಾರ್ಥಿಗಳು ಪ್ರಯೋಗಗಳನ್ನು ನಡೆಸಲು ಅನುಕೂಲಕರವಾಗಿದೆ. ಶೈ
ವೃತ್ತಿಪರ ಆ್ಯಡ್‍ಒನ್ ಕೋರ್ಸ್‍ಗಳು– ಸೋಫ್ಟ್ ಸ್ಕಿಲ್ಸ್ ಆ್ಯಂಡ್ ಎಂಪ್ಲಾಯೆಬಿಲಿಟಿ, ಎಂಟ್ರಿ ಟೂ ಸಿ.ಎ, ಸ್ಪೋಕನ್ ಇಂಗ್ಲಿಶ್, ಬೇಸಿಕ್ ಫ್ರೆಂಚ್, ಡ್ರಾಮಾ, ಬ್ಯೂಟೀಷಿಯನ್, ಬೇಸಿಕ್ ಕಂಪ್ಯೂಟರ್ಸ್ ಆ್ಯಂಡ್ ಟ್ಯಾಲಿ, ಆಡುಗೆಕಲೆ, ಯೋಗ, ಫೂಟೋಗ್ರಾಫಿ ಮುಂತಾದ ಸರ್ಟಿಫಿಕೇಟ್ ಕೋರ್ಸುಗಳ ತರಬೇತಿ ನೀಡಲಾಗುತ್ತದೆ.
ಕಾಲೇಜು ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಅನುಭವಿ ಶಿಕ್ಷಕ ವೃಂದವನ್ನು ಒಳಗೊಂಡಿದ್ದು, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತದೆ. ಹದಿಹರೆಯದ ವಿದ್ಯಾರ್ಥಿಗಳಲ್ಲಿ ಉಂಟಾಗುವ ಸಮಸ್ಯೆ, ಮಾನಸಿಕ ಒತ್ತಡಗಳ ಬಗ್ಗೆ ಆಪ್ತ ಸಮಾಲೋಚನೆಗಾಗಿ ಕೌನ್ಸಿಲರ್ ಅನ್ನು ನೇಮಕ ಮಾಡಿರುವುದು ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳಲ್ಲಿ ಎನಾದರೂ ಸಮಸ್ಯೆ ಕಂಡುಬಂದಾಗ ಗುರುತಿಸಿ ಕೌನ್ಸಿಲರ್ ಬಳಿ ಕಳುಹಿಸಿ ಸೂಕ್ತ ಮಾರ್ಗದರ್ಶನವನ್ನು ನೀಡಲಾಗುತ್ತದೆ.
ಸಕಲ ಭದ್ರತೆಯೊಂದಿಗೆ ಹೊರವಲಯದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿನಿಲಯ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿನಿಲಯದಲ್ಲಿ ಉಪನ್ಯಾಸಕರು ಕೂಡಾ ಉಳಿಯುವ ವ್ಯವಸ್ಥೆಯಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಇವರು ಗಮನ ಹರಿಸುತ್ತಾರೆ. ಕಾಲೇಜಿನಲ್ಲಿ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
ಇಲ್ಲಿಯ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿರುವಂತೆ ಸಾಂಸ್ಕೃತಿಕ-ಸಾಹಿತಿಕ, ಸಾಧನೆಗಳಲ್ಲೂ ಅಂತರ್ಕಾಲೇಜು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ರಕ್ತದಾನ ಶಿಬಿರ, ಆಶ್ರಮ ಹಾಗೂ ಅನಾಥಾಲಯಗಳ ಭೇಟಿ, ಅಸ್ಪತ್ರೆಗಳಲ್ಲಿ ಸೇವೆ, ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವಂತಹ ಬೀದಿನಾಟಕಗಳು ಹಾಗೂ ಸ್ವಚ್ಛಭಾರತ ಅಭಿಯಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಶೈಕ್ಷಣಿಕ ಅಭಿವೃದ್ಧಿಗೋಸ್ಕರ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರ, ವಿಚಾರಸಂಕೀರ್ಣಗಳನ್ನು ಹಾಗೂ ಶೈಕ್ಷಣಿಕ ಪ್ರವಾಸ ಹಾಗೂ ಸಣ್ಣ ಕೈಗಾರಿಕಾ ವಲಯಗಳಿಗೆ ಭೇಟಿಯನ್ನು ಆಯೋಜಿಸಲಾಗುತ್ತದೆ. ಅಂತೆಯೇ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್, ಲೆಕ್ಕ ಪರಿಶೋಧನೆ, ವಾಣಿಜ್ಯೋದ್ಯಮ, ಕೈಗಾರಿಕಾ ಕ್ಷೇತ್ರ, ಹಾಗೂ ಪ್ರತಿಷ್ಟಿತ ಹೊಟೇಲುಗಳಲ್ಲಿ ಪ್ರೊಜೆಕ್ಟ್ ಕೆಲಸಗಳನ್ನು ವಹಿಸಿ ಅವರಿಗೆ ಜೀವನ ಕೌಶಲ್ಯ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ನಿಪುಣತೆಯನ್ನು ಸಾಧಿಸಲು ಅವಕಾಶ ಮಾಡಿಕೊಡಲಾಗುತ್ತದೆ.
ಸಾಧನೆಗಳು: ರಾಷ್ಟ್ರೀಯ ಸೇವಾ ಯೋಜನೆಯ ಕ್ಷೇತ್ರದಲ್ಲಿಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರದ ರಾಜ್ಯಮಟ್ಟದ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ‘ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿ ಸಾವಿಯೊ ಡಿಸೋಜಾ, ಎಸಿಸಿಎ ಹಾಗೂ ಸ್ಯಾಪ್ ಕೋರ್ಸುಗಳನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.
ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪರೀಕ್ಷೆಗಳಲ್ಲಿ 95% ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಕಾಲೇಜು ಪಠ್ಯೇತರ ಚಟುವಟಿಕೆಗಳನ್ನು ಹೊರತುಪಡಿಸಿ ವೃತ್ತಿಪರ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ತಯಾರುಗೊಳಿಸಿದೆ. ಅಲ್ಲದೇ, ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿ, ಉದ್ಯೋಗಮೇಳ ಹಾಗೂ ಇಂಟರ್ನ್‍ಶಿಪ್ ಮೂಲಕ ಉದ್ಯೋಗವಕಾಶಗಳನ್ನು ಒದಗಿಸಿಕೊಟ್ಟಿದೆ. ಹೊಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ತಾಜ್, ಗೋಲ್ಡ್‍ಫಿಂಚ್, ಅಂದಾಜ್, ಶೆರಾಟೊನ್, ಮ್ಯಾರಿಯೆಟ್, ನೊವಾಟೆಲ್ ಮುಂತಾದ ಪ್ರತಿಷ್ಟಿತ ಹೋಟೆಲುಗಳಲ್ಲಿ ಇಂಟರ್ನ್‍ಶಿಪ್ ತರಬೇತಿಯನ್ನು ಪಡೆದು ಶೇಕಡಾ 100 ಉದ್ಯೋಗವಕಾಶದ ದಾಖಲೆ ಪಡೆದಿದೆ.
ಪದವಿ ಕಾಲೇಜು ದಾಖಲಾತಿಗೆ ಹಾಗೂ ಇತರ ಮಾಹಿತಿಗಾಗಿ ಸಂಪರ್ಕಿಸಿ: 0824-2423822, 9980425382, 9845165382
Email : milagrescollege@yahoo.com website : www.milagrescollege.edu.in