ಕಾರ್ಕಳ: ಲಾಕ್ ಡೌನ್ ನಿಂದಾಗಿ ಕೆಎಂಎಫ್ ನಲ್ಲಿ ಪ್ರತಿದಿನ ಹೆಚ್ಚುವರಿಯಾಗಿ ಉಳಿಯುವ 7 ಲಕ್ಷ ಲೀಟರ್ ಹಾಲನ್ನು ರಾಜ್ಯ ಸರಕಾರ ಖರೀದಿಸಿ, ಬಡವರಿಗೆ ಮತ್ತು ಸ್ಲಂ ನಿವಾಸಿಗಳಿಗೆ ಉಚಿತವಾಗಿ ಹಂಚುವ ನಿರ್ಧಾರ ಸಕಾಲಿಕವಾಗಿದೆ. ಇದರಿಂದಾಗಿ ಏಕಕಾಲಕ್ಕೆ ರಾಜ್ಯದ ಎಲ್ಲಾ ಒಕ್ಕೂಟಗಳಿಗೆ, ಹೈನುಗಾರರಿಗೆ ಮತ್ತು ಬಡಜನತೆಗೆ ಬಹಳ ಉಪಕಾರವಾಗುವುದು.ಹೈನುಗಾರರಿಗೆ ಆರ್ಥಿಕ ಚೈತನ್ಯದ ಜೊತೆಗೆ ರಾಜ್ಯದ ಬಡಜನತೆಗೆ ಉಚಿತವಾಗಿ ಪೌಷ್ಟಿಕ ಆಹಾರ ದೊರಕಿದಂತಾಗುತ್ತದೆ. ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರ ಈ ಸಕಾಲಿಕ ನಿರ್ಧಾರಕ್ಕೆ ರಾಜ್ಯದ ಸಮಸ್ತ ಹೈನುಗಾರರ ಪರವಾಗಿ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಾಣೂರು ನರಸಿಂಹ ಕಾಮತ್ ನಿರ್ದೇಶಕರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ, ಮಂಗಳೂರು.
