ಕಾರ್ಕಳ : ಹೊಸಸಂಜೆ ಪ್ರಕಾಶನದ 19ನೆಯ ಪ್ರಕಟಿತ ಕೃತಿ ವೀಣಾ ಶ್ಯಾನಭೋಗ್ ವಿರಚಿತ `ವಾಣಿಯ ವೀಣೆಯ ತಂತಿಗಳು' ಅಕ್ಟೋಬರ್ 4, ಭಾನುವಾರ ಹಿರಿಯಡ್ಕ ಕೋಟ್ನಕಟ್ಟೆಯ ಗಾಯತ್ರಿ ಧ್ಯಾನಮಂದಿರದ ರಾಜಗೋಪಾಲ ಎಂ. ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ಅಷ್ಟಾವಧಾನಿ ಉಮೇಶ್ ಗೌತಮ್ ನಾಯಕ್ ಮತ್ತು ಹಿರಿಯ ಪತ್ರಕರ್ತ ಕೆ. ಪದ್ಮಾಕರ ಭಟ್ ಈದು ಹೊಸ್ಮಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ಎಲ್. ಸುಧಾಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೊಸಸಂಜೆ ಪ್ರಕಾಶನದ ಆರ್. ದೇವರಾಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.