ಯೇಸು ಕ್ರಿಸ್ತರು ಶಿಲುಬೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭ ಶುಕ್ರವಾರದಂದು ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಚಚ್ನಿಂ ಚರ್ಚ ನಿಂದ ಪಂಚಾಯತ್ ಮಾರ್ಗವಾಗಿ ಶಿಲುಬೆಯ ಗುಡ್ಡದ ವರೆಗೆ ಶಿಲುಬೆ ಹಾದಿಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡರು.
ಚರ್ಚ್ ಧರ್ಮ ಗುರುಗಳಾದ ವಂ ಫ್ರಾನ್ಸಿಸ್ ಕ್ರಾಸ್ತಾ , ಪ್ರಧಾನ ಧರ್ಮಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಕೌಟುಂಬಿಕ ಸಲಹಾ ಕೇಂದ್ರದ ನಿರ್ದೇಶಕರಾಗಿರುವ ವಂ ಸ್ವಾಮಿ ಆಲ್ವಿನ್ ಡಿಸೋಜ, ಶಿಲುಬೆಯ ಪ್ರಾಮುಖ್ಯತೆಯ ಬಗ್ಗೆ ಪ್ರವಚನ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಲೊರೆಟ್ಟೊ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ನಿನ್ನತ್ತ ರಾಗಿರುವ ವಂ. ಸ್ವಾಮಿ ನೋರ್ಬಟ್ ಲೋಬೊ, ಲೋರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಯರಾದ ವಂ ಜೆಸನ್ ಮೊನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು. ನೂರಾರು ಭಕ್ತಾದಿಗಳು ಈ ಪ್ರಾರ್ಥನ ಕೂಟದಲ್ಲಿ ಭಕ್ತಿಯಿಂದ ಭಾಗವಹಿಸಿದರು.