ಪ್ರಕೃತಿಯ ಸೊಬಗಿಗೆ ತನ್ನಲ್ಲಿರುವ ವಿಶೇಷವಾದ ಕೌತುಕಕ್ಕೆ ಎಂಥವರನ್ನು ತನ್ನೆಡೆಗೆ ಸೆಳೆಯುವಂತೆ ಮಾಡುವ ಶಕ್ತಿ ಇದೆ ಮಳೆಗಾಲದ ವಿಶೇಷ ಅತಿಥಿ ಯಾದ ಅಣಬೆ ಒಂದು ದಿನದಲ್ಲಿ ಕೊಡೆಯಂತೆ ಅರಳಿ ಕರಗಿಹೋಗುತ್ತದೆ ಅಣಬೆಗಳಲ್ಲಿ ಹಲವಾರು ವಿಧಗಳಿದ್ದು ಕೆಲವಷ್ಟೇ ಆಹಾರವಾಗುತ್ತದೆ.

ಇನ್ನು ಕೆಲವು ವಿಷ ವಾಗಿದ್ದು ಕೆಲವು ನೋಡಲಷ್ಟೇ ಚಂದ ಮರ ಅಣಬೆಗಳು ಅದರಲ್ಲೂ ರಂಗರಂಗ್ ರಂಗವಲ್ಲಿ ಅಂತೆ ವೈವಿಧ್ಯಮಯ ಬಣ್ಣಗಳಲ್ಲಿ ಇರುತ್ತವೆ ಕುಮಾರ್ ಪೆರ್ನಾಜೆ ಅವರಲ್ಲಿ ಮರದಲ್ಲಿ ಕಂಡುಬಂದ ಅಣಬೆ ಹೂವಿನಂತೆ ಅರಳಿ ತನ್ನ ಸೊಬಗಿಗೆ ಜೇನು ದುಂಬಿಗಳು ಆಕರ್ಷಣೆ ಗೊಳ್ಳದಿದ್ದರೂ ಜನರನ್ನು ಹುಬ್ಬೇರಿಸುವಂತೆ ಮಾಡಿದ್ದಂತೂ ನಿಜ ಹೂವಿನಂತೆ ಅಂತರ ಅಂತರ ವಾಗಿ ಎರಡು ಅಡಿ ಅಗಲ ಶ್ವೇತವರ್ಣದಲ್ಲಿ ಪುಷ್ಪದಂತೆ ಕಂಗೊಳಿಸಿ ಇದು ಹಲವಾರು ದಿನಗಳ ತನಕ ಎಲ್ಲರ ಅಚ್ಚರಿಗೂ ಪಾತ್ರವಾಗಿದೆ ಅಚ್ಚ ಬಿಳಿ ಯಲ್ಲಿ ಗಳಿಸುತ್ತಿದ್ದು ವಿರಳವೇ.... ಹೀಗೂ ಉಂಟೆ... !!!! ನಾನೆಂಬುದು ಅಹಂಕಾರ ನಾವು ಎಂಬುದು ಅಲಂಕಾರ ವಾಗಿದೆ ಅಲ್ಲವೇ....

ಚಿತ್ರ-ಬರಹ:- ನಂದನ್ ಕುಮಾರ್ ಪೆರ್ನಾಜೆ, ಪುತ್ತೂರು ಪೆರ್ನಾಜೆ ಮನೆ ಮತ್ತು ಅಂಚೆ ಪುತ್ತೂರು ತಾಲೂಕು ದ.ಕ. 5 7 4 2 2 3