ಕರ್ನಾಟಕ ಸರಕಾರ ಆರ್ಥಿಕ ಕಾರಣವೊಡ್ಡಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ನಿಸೆ ಹ ಸಲ್ಲಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಜೂನ್ ಒಂದರಿಂದ ಕೈಬಿಡುವ ಆದೇಶ ಜಾರಿ ಮಾಡಿದ್ದು ಈ ದಿಢೀರ್ ಘೋಷಣೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಸುಮಾರು 25000 ಗೃಹರಕ್ಷಕ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದು ನೆರೆಪರಿಹಾರ, ಸಾರಿಗೆ ಸುವ್ಯವಸ್ಥೆ, ಬಂದೋಬಸ್ತ್, ಗಣ್ಯರ ರಕ್ಷಣೆ, ಕಾನೂನು ಸುವ್ಯವಸ್ಥೆ ಮುಂತಾಗಿ ಅಹರ್ನಿಶಿ ದುಡಿಯುತ್ತಾ ಬಂದಿದ್ದಾರೆ. ಅನೇಕ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು ಈ ಗೃಹ ರಕ್ಷಕದಳದವರ ಸಹಕಾರದಿಂದ ನಿಭಾಯಿಸಲ್ಪಡುತ್ತಿದೆ. 

ಪೋಲಿಸ್ ಇಲಾಖೆ ಅಧೀನದಲ್ಲಿ ಸುಮಾರು 12000 ಮಂದಿಯನ್ನು ಕೈಬಿಡುಲಾಗುತ್ತಿರುವುದು ಆಡಳಿತ ವ್ಯವಸ್ಥೆ, ಹಾಗೂ ಆದ್ಯತೆಗಳನ್ನು ಕಡೆಗಣಿಸುತ್ತಿರುವ ರಾಜ್ಯ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸುಮಾರು 15 ವರ್ಷಗಳಿಂದಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸಿದ ಈ ಬಡಸಿಬ್ಬಂದಿಗಳನ್ನು ಕೈಬಿಡುತ್ತಿರುವುದನ್ನು ಜನತಾದಳ ತೀವ್ರವಾಗಿ ವಿರೋಧಿಸುತ್ತದೆ. 

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 250ರ ಪೈಕಿ ಕೇವಲ 80 ಮಂದಿಯನ್ನು ಉಳಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮುಖಾಂತರ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲು ಕೋರಲಾಗಿ ಯುವಕರನ್ನು ಬಳಸಿ ಅವರ ಭಾವನೆಗಳನ್ನು ಕೆರಳಿಸಿ ಮತಗಳಿಸಿ ಇದೀಗ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದವರನ್ನೂ ಕೈಬಿಡುವ ಮೂಲಕ ಕೊರೋನಾ ಸಾಂಕ್ರಾಮಿಕದ ಹೆಸರಿನಲ್ಲಿ ಯುವಜನಾಂಗವನ್ನು ಬಲಿಕೊಡುತ್ತಿರುವುದು ದುರ್ದೈವ. ಕೆಲ ಹೊರಗುತ್ತಿಗೆದಾರರು ಸಂಬಳವನ್ನೂ ಪಾವತಿಸದೆ ಕೈಬಿಟ್ಟಿದ್ದಾರೆ. - ಕೋವಿಡ್ ವಾರಿಯರ್ ಎಂದು ವೈದ್ಯರುಗಳನ್ನು ಹೊಗಳುತ್ತಾ ಎರಡು ತಿಂಗಳಿಂದ ವೈದ್ಯರಿಗೆ ಸಂಬಳವನ್ನೇ ಪಾವತಿಸದೆ ಇರುವ ಅಮಾನವೀಯ ನಡೆ ಸರಕಾರವಿದ್ದೇನು ಸಾಧಿಸುತ್ತಿದೆ ಎಂದು ಭಾವಿಸುವಂತಾಗಿದೆ ಎಂದು ರಾಜ್ಯ ಜನತಾದಳದ ಹಿರಿಯ ಉಪಾ ಎಂ.ಬಿ.ಸದಾಶಿವ ಹೇಳಿಕೆಯಲ್ಲಿ ತಿಳಿಸಿದ್ದಾರೆ.