ಬಂಟ್ವಾಳ : ಗೋಪಾ¯ಕೃಷ್ಣ ಆಯುರ್ವೇದ ಔಷದಾಲಯ ಇದರ ವತಿಯಿಂದ ತುರ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷದಗಳ ಪಾತ್ರ ಎಂಬ ವಿಚಾರವಾಗಿ ಆರ್ಯುವೇದ ವೈದ್ಯರಿಗೆ ಮಾಹಿತಿ ಕಾರ್ಯಕ್ರಮವು ಬಿ.ಸಿ.ರೋಡ್ ನ ಹೋಟೇಲ್ ರಂಗೋಲಿಯಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಶ್ಯಾಮ್ ಭಟ್ ಉದ್ಘಾಟಿಸಿದರು. ಅವರು ಕಳೆದ ನೂರು ವರ್ಷಗಳಿಂದ ಬಂಟ್ವಾಳದಲ್ಲಿ ವೈದ್ಯ ಆಯುರ್ವೇದ ಭೂಷಣ ಶ್ರೀ ಶುಕಾಚಾರ್ಯ , ವೈದ್ಯ ನರೇಂದ್ರಾಚಾರ್ಯ ಹಾಗೂ ವೈದ್ಯ ನಿರಂಜನ ಆಚಾರ್ಯರಿಂದ ನಡೆಸಲ್ಪಡುತ್ತಿರುವ ಆಯುರ್ವೇದ ಚಿಕಿತ್ಸೆಯ ಸೇವೆಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮವು ಈ ಸಂಸ್ಥೆಯ ಶತಮಾನೋತ್ಸವದಂತೆ ಆಗಿದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ  ಗೋವಾದ ಪ್ರಖ್ಯಾತ ವೈದ್ಯರಾದ ಡಾ.ಉಪೇಂದ್ರ ದೀಕ್ಷಿತ್  ಅನೇಕ ತುರ್ತು ಚಿಕಿತ್ಸೆಗೆ ಬೇಕಾಗಿರುವ ಖಾಯಿಲೆಗಳಲ್ಲಿ ಉಪಯೋಗಿಸಲ್ಪಡುವ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ವೈದ್ಯರಾದ ಡಾ.ನಿರಂಜನ ಆಚಾರ್ಯ ಸ್ವಾಗತಿಸಿದರು.  ಡಾ ಶಿವಪ್ರಸಾದ್ ಶೆಟ್ಟಿ ವಂದಿಸಿ , ಡಾ ವಿಶ್ವನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ಮಂಗಳೂರು ಉಡುಪಿ ಹಾಗೂ ಪುತ್ತೂರು ನಿಂದ ಅನೇಕ ವೈದ್ಯರುಗಳು ಭಾಗವಹಿಸಿ ಕಾಂiÀರ್iಕ್ರಮದ ಪ್ರಯೋಜನ ಪಡೆದರು.