ಉಜಿರೆ: ಮದ್ಯ ವ್ಯಸನ ಮುಕ್ತರ ಶತಮಾನೋತ್ಸವ ಆಚರಣೆ: ಜಾಗೃತಿ ಮಿತ್ರ ಪ್ರಶಸ್ತಿ ವಿತರಣೆ.

 ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮದ್ಯವಸ್ಯನ ಮುಕ್ತರಿಗೆ ಹಿತವಚನ ನೀಡಿದರು. (2 ಯು.ಜೆ.ಆರ್. 1)

ಸ್ವಭಾವದಿಂದ ಎಲ್ಲರೂ ಒಳ್ಳೆಯವರಾಗಿರುತ್ತಾರೆ. ಆದರೆ ಸಹವಾಸ ದೋಷದಿಂದ ಅಥವಾ ಯಾವುದೇ ಆಮೀಷ, ಒತ್ತಡಕ್ಕೆ ಬಲಿಯಾಗಿ ಮದ್ಯಪಾನ ಮಾಡಿದಾಗ ಅವರು ವಿಕೃತ ಮನುಷ್ಯರಾಗಿ ರಾಕ್ಷಸೀ ಪ್ರವೃತ್ತಿ ತೋರಿಸುತ್ತಾರೆ. ವ್ಯಸನ ಮುಕ್ತರು

ದೃಢ ಸಂಕಲ್ಪದಿಂದ, ಕಠಿಣ ವ್ರತ-ನಿಯಮಗಳ ಪಾನೆಯೊಂದಿಗೆ ಆರೋಗ್ಯಪೂರ್ಣ ಜೀವನ ನಡೆಬೇಕು. ಯಾವುದೇ ಆಮೀಷಕ್ಕೆ ಒಳಗಾಗಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳೀದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಎರಡು ಸಾವಿರ  ಮಂದಿ ಮದ್ಯ ವ್ಯಸನ ಮುಕ್ತರು ಮತ್ತು ಅವರ ಕುಟುಂಬದವರ ಶತ ದಿನೋತ್ಸವ ಆಚರಣೆ ಸಮಾರಂಭದಲ್ಲಿ ಮಾತನಾಡಿದರು.

ಮನಸ್ಸಿಗೆ ಶಾಂತಿ, ನೆಮ್ಮದಿ ಇರಬೇಕಾದರೆ ದೃಢ ಸಂಕಲ್ಪದೊಂದಿಗೆ ವ್ಯಸನ ಮುಕ್ತರಾಗಿ ಸಾರ್ಥಕ ಜೀವನ ನಡೆಸಬೇಕು. ವ್ಯಸನ ಮುಕ್ತರು ಎಂದೂ ಮಾನಸಿಕವಾಗಿ ದುರ್ಬಲರಾಗಬಾರದು. ಮದ್ಯವರ್ಜನ ಶಿಬಿರ ಎಂಬುದು ದೊಡ್ಡ ಸೇವೆಯಾಗಿದೆ. ಶಿಬಿರದಿಂದಾಗಿ ವ್ಯಸನ ಮುಕ್ತರಲ್ಲಿ ಆದ ಪರಿವರ್ತನೆಯಿಂದಾಗಿ ಆಯುಷ್ಯ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಸಂಬಗ್ಗೆ ತಮ್ಮ ಅನುಭವ ವಿವರಿಸಿದರು.

ಜಾಗೃತಿ ಮಿತ್ರ ಪ್ರಶಸ್ತಿ: ಉತ್ತಮ ಸಾಧನೆ ಮಾಡಿದ ನವಜೀವನ ಸದಸ್ಯರಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಹೆಗ್ಗಡೆಯವರು ಗೌರಸಾರದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ, ಗೌರವ ಹೆಚ್ಚಾಗಿ ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದು ಹೆಗ್ಗಡೆಯವರು ಹೇಳಿದರು.

ಮಹಿಳೆಯರು ಕೂಡಾ ಮನೆಯಲ್ಲಿ ಗಂಡಸರನ್ನು ಪ್ರೀತಿ- ವಿಶ್ವಾಸ, ಗೌರವದಿಂದ ನೋಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಮಂಡ್ಯದ ಶ್ರೀಲಕ್ಷ್ಮೀ ಮತ್ತು ಕಡೂರಿನ ಶಿವಮೂರ್ತಿ ವ್ಯಸನ ಮುಕ್ತರಾದ ಬಳಿಕ ಕುಟುಂಬದಲ್ಲಾದ ಪರಿವರ್ತನೆ, ಶಾಂತಿ, ನೆಮ್ಮದಿಯ ವಿಸಿದರು.

ಜಾಗೃತಿ ಮಿತ್ರ ಪ್ರಶಸ್ತಿ ಪುರಸ್ಕøತರು:

ಕೃಷಾಚಾರ್ಯ, ನಾಗಮಂಗಲ, ಮಂಡ್ಯ

ಎಲ್.ಎಚ್. ಉಮೇಶ್, ದಾವಣಗೆರೆ

ಎ.ಆರ್. ಆನಂದ್, ಮಂಡ್ಯ

ಭೀಮಪ್ಪ ಮರ್ಯಾಣಿ, ಅಥಣಿ, ಬೆಳಗಾವಿ

ಯೋಗಾನಂದ, ಚನ್ನರಾಯಪಟ್ಟಣ, ಹಾಸನ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ಪಾೈಸ್ ಸ್ವಾಗತಿಸಿದರು. ಯೋಜನಾಧಿಕಾರಿ ತಿಮ್ಮಯ ನಾಯ್ಕ ಧನ್ಯವಾದವಿತ್ತರು.

ಮೇಲ್ವಿಚಾರಕರು, ಯೋಜನಾಧಿಕಾರಿಗಳು, ಆರೋಗ್ಯ ಸಹಾಯಕರು ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮುಖ್ಯಾಂಶಗಳು:-

ಮನೆಯಲ್ಲಿಯೂ, ಮನದಲ್ಲಿಯೂ ಶಾಂತಿ, ನೆಮ್ಮದಿ ಇರಬೇಕು.

ಸ್ವಭಾವತಃ ಎಲ್ಲರೂ ಒಳ್ಳೆಯವರು. ಆದರೆ ಮದ್ಯಪಾನದಿಂದ ರಾಕ್ಷಸೀ ಪ್ರವೃತ್ತಿ ತೋರಿಸುತ್ತಾರೆ.

ವ್ಯಸನ ಮುಕ್ತರಾಗಿ ದೇವರ ದರ್ಶನ ಮಾಡಿದಾಗ, ದೇವರಿಗೂ, ಭಕ್ತರಿಗೂ ಅತೀವ ಆನಂದವಾಗುತ್ತದೆ.

ವ್ಯಸನ ಮುಕ್ತರು ದೃಢ ಸಂಕಲ್ಪದಿಂದ ಆರೋಗ್ಯ ಪೂರ್ಣ ಜೀವನ ನಡೆಸಬೇಕು.

ಎರಡು ಸಾವಿರ ಮಂದಿ ವ್ಯಸನ ಮುಕ್ತರು ಮತ್ತು ಕುಟುಂಬಸ್ಥರು ಸಮಾವೇಶದಲ್ಲಿ ಭಾಗವಹಿಸಿದರು.

ವ್ಯಸನ ಮುಕ್ತರಾದರೆ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ.

ಮದ್ಯವರ್ಜನ ಶಿಬಿರ ಪವಿತ್ರ ಸೇವೆ.