ಧರ್ಮಸ್ಥಳ :ಅಪಪ್ರಚಾರಕ್ಕೆ ಜನ ಉತ್ತರ ನೀಡುತ್ತಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಇಂದು ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಮೇಲಿನ ಅಪಪ್ರಚಾರ ಮಾಡುವವರಿಗೆ ಜನ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ. ಇದರ ಬಗ್ಗೆ ನಾನೇನು ಪ್ರತಿಕ್ರಿಯಿಸಲಾರೆ. ಸುಮಲತಾ ಎಂಬ ಹೆಸರಲ್ಲಿ ಬೇರೆ ಬೇರೆ ಅಭ್ಯರ್ಥಿಗಳು ಸ್ಪರ್ಧಿಸಿರುವ ಬಗ್ಗೆ ಮಾತನಾಡಿದ ಅವರು.. ಈ ಹಿಂದೆ
ಪುಟ್ಟಣ್ಣಯ್ಯ ಸ್ಪರ್ಧೆ ಸಂದರ್ಭ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ನಾವು ಏನು ಅಪರಿಚಿರಲ್ಲ.. ರಾಜ್ಯದ ಜನರಿಗೆ ಚಿರಪರಿಚಿತರು, ಜನ ನಮ್ಮನ್ನು ಗುರುತಿಸಿ ಮತ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳಕ್ಕೆ ಕಳೆದ ಎರಡು ವರ್ಷಗಳ
ಹಿಂದೆ ಭೇಟಿ ನೀಡಿದ್ದೆ, ಅಂಬರೀಶ್ ಧರ್ಮಸ್ಥಳ ಕ್ಷೇತ್ರದ ಮೇಲಿರುವ ಅಭಿಮಾನದಂತೆ ನಾನೂ ಕೂಡ ಇಂದು
ಭೇಟಿ ನೀಡಿದ್ದೇನೆ. ವಿಶೇಷ ಪೂಜೆ ಸಲ್ಲಿಸಿದ್ದೇನೆ. ಮಂಡ್ಯ ಜಿಲ್ಲಾಧಿಕಾರಿ ಕುರಿತು ಕಾನೂನಿನ ಚೌಕಟ್ಟಿನಲ್ಲಿ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು. *ನಾಳೆಯಿಂದ ಮತ ಪ್ರಚಾರ
ಶ್ರೀರಂಗ ಪಟ್ಟಣದಲ್ಲಿ ಈಗಾಗಲೇ ದರ್ಶನ್ ಮತ ಪ್ರಚಾರ ಕೈಗೊಂಡಿದ್ದಾರೆ. ಮಂಗಳವಾರ ನಟ ಯಶ್ ಪ್ರಚಾರದಲ್ಲಿ ಕೂಡಿಕೊಳ್ಳಲಿದ್ದಾರೆ. ನಾನು ಮಂಗಳವಾರದಿಂದ ಪ್ರಚಾರದಲ್ಲಿ ನಿರಂತರ ತೆರಳಲಿದ್ದೇನೆ.
ಸುಮಲತಾ ಅಂಬರೀಶ್ ಮುಂಜಾನೆ 5 ಗಂಟೆಗೆ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಅವರ ಜತೆ ಧರ್ಮಸ್ಥಳಕ್ಕೆಆಗಮಿಸಿ 10.30 ಗಂಟೆಗೆ ದೇವರ ದರ್ಶನ ಮಾಡಿದರು. ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.