ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ. ಮತ್ತು ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಮಾಜೆ ಯಲ್ಲಿ ಜರಗಿದ ಕಾನೂನು ಸಾಕ್ಷರಥಾ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಮಾಹಿತಿ ಶಿಬಿರವನ್ನು ತಾ.ಕಾ.ಸೇ.ಸಮಿತಿ ಯ ಸದಸ್ಯೆ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀ ಶೆ ಪ್ರತಿಭಾ ಡಿ.ಎಸ್ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ವೀರೇಂದ್ರ ಸಿದ್ದಕಟ್ಟೆ ಮಾದಕ ದ್ರವ್ಯ ನಿಷೇಧ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ ರಾವ್ ಪುಂಚಮೆ , ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್ , ಹಿರಿಯ ನ್ಯಾಯವಾದಿ ಎ.ಕೆ.ರಾವ್ ಮತ್ತು ನ್ಯಾಯವಾದಿ ಗಣೇಶ್ ಪೈ ಉಪಸ್ಥಿತರಿದ್ದರು.