ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂ. ಮತ್ತು ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಅಮ್ಟಾಡಿ ಗ್ರಾ.ಪಂ. ನಲ್ಲಿ ಜರಗಿದ ಕಾನೂನು ಸಾಕ್ಷರಥಾ ಮತ್ತು ಸಂಚಾರಿ ನ್ಯಾಯಾಲಯದ ಕಾನೂನು ಮಾಹಿತಿ ಶಿಬಿರವನ್ನು ಸಿವಿಲ್ ನ್ಯಾಯಾಧೀಶೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರತಿಭಾ ಡಿ.ಎಸ್ ಉದ್ಘಾಟಿಸಿದರು.  ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಎಚ್.ಸತೀಶ್ ರಾವ್ ಹಿರಿಯ ನಾಗರಿಕರ ಸಂರಕ್ಷಣಾ ಅಧಿನಿಯಮ ಬಗ್ಗೆ  ವಾಹನ ಕಾಯಿದೆ ಬಗ್ಗೆ ಮಾಹಿತಿ ನೀಡಿದರು.

ಮಾಜಿ ಅಧ್ಯಕ್ಷ ಆಶ್ವನಿ ಕುಮಾರ್ ರೈ ಸಾಮಾನ್ಯ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಮತದಾನದ ಜಾಗೃತಿ ಬಗ್ಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು. ವೇದಿಕೆಯಲ್ಲಿ ತಾ.ಪಂ.ಸಹಾಯಕ ನಿರ್ದೇಶಕ ಪ್ರಶಾಂತ್, ಪಂ.ಅಭಿವೃದ್ಧಿ ಅಧಿಕಾರಿ ಮಹಮ್ಮದ್, ಜಿ.ಪಂ ಇಂಜಿನಿಯರ್ ಅಜಿತ್ ಕುಮಾರ್  ವಕೀಲರಾದ ಎ.ಕೆ.ರಾವ್, ಆಶಾಮಣಿ, ಮೋಹನ್ ಪ್ರಭು, ಗಿರಿಶ್ ಮುಳಿಯ, ಸುದರ್ಶನ್ ಕುಮಾರ್, ಶಕೀನಾ , ನಿರ್ಮಲಾ, ಸುನೀತಾ, ಸುಂದರ ಬಾಚಕೆರೆ, ಸತ್ಯನಾರಾಯಣ, ಎಂ.ವೆಂಕಟೇಶ್ ಭಟ್, ಭಾನುಶಂಕರ್ ಬನ್ನಿಂತಾಯ , ವೀರೇಂದ್ರ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.