ಉಡುಪಿ,(ಫೆಬ್ರವರಿ 24): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ದ್ವಿತೀಯ ಬಿ.ಎ/ ಬಿ.ಕಾಂ, ಅಂತಿಮ ಬಿ.ಇಡಿ/ ಎಂ.ಎ/ ಎಂ.ಕಾo/ ಎಂ.ಬಿ.ಎ/ ಎಂ.ಎಸ್ಸಿ ಕೋರ್ಸ್ಗಳಿಗೆ ಬೋಧನಾ ಶುಲ್ಕ ಪಾವತಿಸಿ, ನವೀಕರಿಸಿಕೊಳ್ಳಲು ದಂಡ ಶುಲ್ಕವಿಲ್ಲದೇ ಮಾರ್ಚ್ 10 ಕೊನೆಯ ದಿನ, 200 ರೂ. ದಂಡ ಶುಲ್ಕದೊಂದಿಗೆ ಮಾರ್ಚ್ 20 ಹಾಗೂ 400 ರೂ. ದಂಡ ಶುಲ್ಕದೊಂದಿಗೆ ಮಾರ್ಚ್ 31 ಕೊನೆ ದಿನವಾಗಿರುತ್ತದೆ.

     ಹೆಚ್ಚಿನ ಮಾಹಿತಿಗಾಗಿ ಕರಾಮುವಿ ವೆಬ್‌ಸೈಟ್ www.ksoumysuru.ac.in ಅಥವಾ ಉಡುಪಿ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ಸಂಪರ್ಕಿಸುವoತೆ ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಕೆ.ಪಿ. ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.