ಉಡುಪಿ,(ಮಾಚ್ 18) : ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪತ್ರ ಪಡೆದು 2 ವರ್ಷದೊಳಗೆ ದೋಣಿ ನಿರ್ಮಿಸದೆ ಪುನಃ ಕಾಲಾವಕಾಶ ಕೋರಿ ಅರ್ಜಿಗಳು ಸ್ವೀಕೃತವಾಗಿದ್ದ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಆದೇಶದನ್ವಯ ದೋಣಿ ನಿರ್ಮಾಣದ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಇಚ್ಛಿಸುವ ಅರ್ಜಿದಾರರು ಅರ್ಜಿಯನ್ನು, ಸಂಪೂರ್ಣ ದಾಖಲಾತಿಗಳೊಂದಿಗೆ ಸಂಬoಧಿಸಿದ ಮೀನುಗಾರಿಕೆ ಇಲಾಖಾ ಕಛೇರಿಗೆ ಸಲ್ಲಿಸಬೇಕು. ಈ ಹಿಂದೆ ಅವಧಿ ವಿಸ್ತರಣೆಗೆ ದಾಖಲಾತಿಗಳನ್ನು ಸಲ್ಲಿಸಿದ ಅರ್ಜಿದಾರರೂ ಸಹ ಸಂಪೂರ್ಣವಾದ ದಾಖಲಾತಿಗಳನ್ನು ಪ್ರಸ್ತುತ ಸ್ಥಿತಿಗನುಸಾರವಾಗಿ ಪುನಃ ಸಲ್ಲಿಸುವಂತೆ ಉಡುಪಿ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.