ಉಡುಪಿ,(ಮಾಚ್ 18) : ಜಿಲ್ಲೆಯಲ್ಲಿ ಯಾಂತ್ರೀಕೃತ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪತ್ರ ಪಡೆಯಲು ಮೀನುಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿ, ಈವರೆಗೆ ಸಾಧ್ಯತಾ ಪ್ರಮಾಣ ಪತ್ರ ಪಡೆಯದ ಅರ್ಜಿದಾರರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.

2016 ನವೆಂಬರ್ 21 ರ ಒಳಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ನಿಯಮಾನುಸಾರ ಸಂಬAಧಿತ ವಿಧಾನಸಭಾ ಕ್ಷೇತ್ರದ ಶಾಸಕರ ಶಿಫಾರಸ್ಸು ಪತ್ರ ಹಾಗೂ 10,000 ರೂ.ಗಳ ನಗದು ಡಿ.ಡಿ ಯೊಂದಿಗೆ ಸಂಬoಧ ಪಟ್ಟ ಇಲಾಖಾ ಕಛೇರಿಯನ್ನು ಸಂಪರ್ಕಿಸಬೇಕು.

ಮಾರ್ಚ್ 31 ರ ಒಳಗೆ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಜಿಲ್ಲಾ ಮಟ್ಟದ ಸಾಧ್ಯತಾ ಪತ್ರ ಸಮಿತಿ ಸಭೆ ಕರೆದು ಸಾಧ್ಯತಾ ಪತ್ರ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.