ಮಂಗಳೂರು: ಶ್ರೀಮತಿ ಮಣೇಲ್ ಉಮಾ ಅಣ್ಣಪ್ಪ ನಾಯಕ್ ( 59 ವರ್ಷ ) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ .16 ಶುಕ್ರವಾರರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು . ಮೃತರು ನಗರದ ಖ್ಯಾತ ಉದ್ಯಮಿ ಹಾಗೂ ಬೆಸಂಟ್ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್   ರವರ ಧರ್ಮಪತ್ನಿ , ಮೃತರು ಪತಿ , ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ .