ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಶುಕ್ರವಾರ 11.9.20 ಸಂಜೆ 6.55ಕ್ಕೆ ನಿಧನರಾದರು. ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಕಳೆದ ಕೆಲ ಸಮಯ ದಿಂದ ಹದ ಗೆಟ್ಟಿತ್ತು 

ಸ್ವಾಮಿ ಅಗ್ನಿವೇಶ್  ಒಬ್ಬ ಭಾರತೀಯ ಧಾರ್ಮಿಕ ಚಿಂತಕರು ಕೆಲವು ತಾತ್ತ್ವಿಕ ಬಿನ್ನಾಭಿಪ್ರಾಯ ಗಳಿದ್ದರೂ ಎಲ್ಲರೊಂದಿಗೆ ಉತ್ತಮ ಸಂಬಂಧ ಇರಿಸಿ ಕೊಂಡಿದ್ದರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಗಳೊಂದಿಗೆ ದೆಹಲಿ ವಿಜ್ಞಾನ ಭವನದಲ್ಲಿ ಬಸವ ಜಯಂತಿ 900, ಆಸ್ಟ್ರೇಲಿಯಾ, 2005, ಬಾರ್ಸಿಲೋನ  2011 ಮೆಲ್ಬೋರ್ನ್, 2014ಸಾಲ್ಟ್ ಲೇಖ್ ಸಿಟಿ  ಅಮೇರಿಕಾ ಹಾಗೂ 2018 ರ  ಕೆನಡ ದೇಶದ ಟೊರೊಂಟೊ ಜಾಗತಿಕ ಧರ್ಮ ಸಂಸತ್ ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧರ್ಮ ಸಂಸತ್ ನಲ್ಲಿ ವಿಚಾರ ಮಂಡಿಸಿದ್ದರು  ಹರಿಯಾಣ, ಆರ್ಯ ಸಮಾಜದ ಪಂಡಿತ ಮತ್ತು ಸಾಮಾಜಿಕ ಕಾರ್ಯಕರ್ತ ಭಾರತದ ಮಾಜಿ ರಾಜ್ಯಸಭೆಯ ಸದಸ್ಯರಾಗಿದ್ದರು. ಅವರು 1981 ರಲ್ಲಿ ಸ್ಥಾಪನೆಯಾದ ಬಾಂಡ್ ಲೇಬರ್ ಲಿಬರೇಷನ್  ಮೂಲಕ 'ನಿರ್ಭಂಧಿತ ಕಾರ್ಮಿಕರ' ವಿರುದ್ಧದ ಅವರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.

ಜನನ: ಸೆಪ್ಟೆಂಬರ್ 21, 1939, ಆಂಧ್ರ ಪ್ರದೇಶ್

ನಿಧನ: ಸೆಪ್ಟೆಂಬರ್ 11, 2020

ಪೂರ್ಣ ಹೆಸರು: ವೇಪ  ಶ್ಯಾಮ್ ರಾವ್ 

ಶಿಕ್ಷಣ: ಕಲ್ಕತ್ತ ವಿಶ್ವವಿದ್ಯಾಲಯ

ಇವರ ನಿದನದಿಂದ ಸರ್ವ ಧರ್ಮ ಸಮ ಭಾವದ ಓರ್ವ ರನ್ನು ಕಳೆದು ಕೊಂಡಂತಾಗಿದೆ. ಅವರ ದಿವ್ಯ  ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ, ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಇಷ್ಟ ಮಿತ್ರ ಅಭಿಮಾನಿ ಬಳಗಕ್ಕೆ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.

-ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ, ಕರ್ನಾಟಕ ಭಾರತ