ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಅಧಿಕೃತ ಘೋಷಣೆ ಮಾಡಿದ ಕೂಡಲೇ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ನಿಜವಾಗಿಯೂ ಈ ನಿರ್ಣಯವನ್ನು ಪರಾಮರ್ಶಿಸಿ ನೋಡಿದರೆ ವಿದ್ಯಾರ್ಥಿಗಳಿಗೆ ಲಾಭಕ್ಕಿಂತ ನಷ್ಟವೇ ಆಗಲಿದೆಯೇನೋ ಎಂಬ ಆತಂಕ ಕಾಡುತ್ತದೆ.
ತಮಾಷೆ ಎನಿಸಿದರೂ ಪರೀಕ್ಷೆ ಸಮಯದಲ್ಲಿ ಮಾತ್ರ ಓದುವ ವಿದ್ಯಾರ್ಥಿಗಳಿದ್ದಾರೆ. ಈ ಮೂಲಕವಾದರೂ ವಿದ್ಯಾರ್ಥಿಗಳಲ್ಲಿ ಜಬಾಬ್ದಾರಿ ಮೂಡಿಸುವ, ಜ್ಞಾನಾರ್ಜನೆಗೆ ಸಹಾಯ ಮಾಡುವ ಕೆಲಸವನ್ನು ಪರೀಕ್ಷೆ ಮಾಡುತ್ತದೆ. ಜೊತೆಗೆ ಕಡಿಮೆ ಅಥವಾ ಹೆಚ್ಚಿನ ಅಂಕ, ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ತಿದ್ದಿಕೊಳ್ಳಲು ನೆರವಾಗುತ್ತದೆ. ಪರೀಕ್ಷೆಯ ರದ್ಧತಿಯಿಂದ ಇವೆಲ್ಲವೂ ತಪ್ಪಿಹೋಗುತ್ತದೆ. ಇದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಿದಂತೆ. ಶಿಕ್ಷಣದ ಜೊತೆ ರಾಜಿ ಮಾಡಿಕೊಂಡಂತೆ.
ಒಂದು ವೇಳೆ ಪರೀಕ್ಷೆ ನಡೆಸದೆ ಸರ್ಕಾರ ಪದವಿ ನೀಡಿದರೆ ಅಥವಾ ಮುಂದಿನ ತರಗತಿಗೆ ಬಡ್ತಿ ನೀಡದರೆ ಮಲತಾಯಿಯಡಿ ಬೆಳೆದ ಮಗುವಿನಂತಾಗಬಹುದು. ತಾಯಿಯು ಮಗುವಿನ ಮೇಲೆ ಎಷ್ಟೇ ಕಾಳಜಿ ವಹಿಸಿದರು ಆ ಮಗುವಿನ ಮನಸ್ಸಿನಿಂದ ಮಲತಾಯಿಯೆಂಬ ಭಾವನೆ ತೆಗೆದುಹಾಕುವುದು ಕಷ್ಟ. ಪರೀಕ್ಷೆಯೇ ಇಲ್ಲದೇ ಬಡ್ತಿ ಪಡೆದ ವಿದ್ಯಾರ್ಥಿಗಳಿಗೆ ತಾವು ಪರೀಕ್ಷೆ ಬರೆಯದೆಯೇ ತೇರ್ಗಡೆ ಹೊಂದಿರುವೆವು ಎಂಬ ಕೊರೆತೆಯನ್ನು ಅಳಿಸಲಾಗುವುದಿಲ್ಲ. ಸರ್ಕಾರ ಪರೀಕ್ಷೆ ರದ್ಧು ಮಾಡಿ ತನ್ನ ಕಷ್ಟ ನಿವಾರಿಸಿಕೊಂಡಿದಯೇ ಹೊರತು ವಿದ್ಯಾರ್ಥಿಗಳದ್ದಲ್ಲ.
-ಶಂಕರ್ ಓಬಳಬಂಡಿ,
ಪ್ರಥಮ ಬಿಎ,
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು