ಮಂಗಳೂರು : ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ ಮತ್ತು ಬೆಂಗಳೂರಿನ ಜನಸೇವಾ ವಿದ್ಯಾಕೇಂದ್ರ ಈ ಪ್ರತಿಷ್ಟಿತ ಶಾಲೆಗಳಿಗೆ 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರತಿಷ್ಟಿತ ಶಾಲೆ ಹಾಗೂ ಪ್ರವೇಶ ಪರೀಕ್ಷೆ ನಡೆಯುವ ಸ್ಥಳ-ಜನಸೇವಾ ವಿದ್ಯಾಕೇಂದ್ರ 20ನೇ ಕಿ.ಮೀ ಬೆಂಗಳೂರು – ಮಾಗಡಿ ರಸ್ತೆ ಚನ್ನೇನ ಹಳ್ಳಿ ಬೆಂಗಳೂರು ನಗರ ಜಿಲ್ಲೆ. ಎಪ್ರಿಲ್ 4 ರಂದು 5ನೇ ತರಗತಿ (ಕನ್ನಡ ಮಾಧ್ಯಮ), 8ನೇ ತರಗತಿ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ತರಗತಿಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಉಪನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟನೆ ತಿಳಿಸಿದೆ.