ಮಂಗಳೂರು :ಲೋಕಸಭಾ ಸಾವ್ರರ್ತಿಕ ಚುನಾವಣೆ -2019 ರ ಮತದಾನ ಮಾಡಲು ಮತದಾರರ ಚೀಟಿ ಅಧಿಕೃತ ದಾಖಲೆ ಅಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ.

ಅರ್ಹ ಮತದಾರರು ಮತದಾನದ ವೇಳೆ  ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರಕಾರ / ರಾಜ್ಯ ಸರಕಾರ / ಸಾರ್ವಜನಿಕ ಸಂಸ್ಥೆಯಿಂದ ಪಡೆದ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್ / ಅಂಚೆ ಕಚೇರಿ ಪಾಸ್ ಪುಸ್ತಕ , ಪಾನ್ ಕಾರ್ಡ್ , ಸ್ಮಾಟ್ ಕಾರ್ಡ್, ಜಾಬ್ ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಿದ ಆರೋಗ್ಯ ವಿಮೆ ಸ್ಮಾಟ್ ಕಾರ್ಡ್ , ಭಾವಚಿತ್ರವಿರುವ ಪಿಂಚಣಿ ದಾಖಲಾತಿ, ಅಧಿಕೃತ ಗುರುತಿನ ಚೀಟಿ, ಆಧಾರ್ ಕಾರ್ಡ್ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಹಾಜರುಪಡಿಸಿ ಮತ ಚಲಾಯಿಸಲು ಅವಕಾಶವಿರುತ್ತದೆ.