ಕೆಸರು ಹೆಚ್ಚಾದ

ಕಮಲವೆಚ್ಚು ಅಂದ

ಹುಳಿ ಹೆಚ್ಚಾದ

ಮೊಸರೇನೋ ಚಂದ


ಪೆಟ್ಟು ಹೆಚ್ಚಾದ

ಶಿಲೆಯ ಕಲೆಯಂದ

ಹೀರಿದಷ್ಟೂ ಸ್ವಾದ

ಹೂವಿನ ಮಕರಂದ


ಕವಲೊಡೆದ ಬೀಜದ ಬಿರುಕು

ನೋಟ ಮಹದಾನಂದ

ತುಳಿತಕ್ಕೊಳಗಾಗಿ ಪುಟಿಯುವ

ಬಾಳಿನ ತೃಪ್ತಿ ಆತ್ಮಾನಂದ


 ಮಾಗಿದ ಮನಸ್ಸು