ಪುಣೆಯಲ್ಲಿ ನಗರದ ಉಡುಪಿ ಮೂಲದ ಹೋಟೆಲ್ ಉದ್ಯಮಿಯೊಬ್ಬರು ತನ್ನದೇ ಹೊಟೇಲ್ ಒಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಗರದ ಸಿಂಹಘಡ್ ರಸ್ತೆಯ ಧಾಯರಿ ಪರಿಸರದ ರಾಜ್ ಹೋಟೆಲಿನಲ್ಲಿ ಉದ್ಯಮಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ .ಪ್ರೇಮನಾಥ್ ಕೃಷ್ಣ ಶೆಟ್ಟಿ ಯವರು ಆತ್ಮಹತ್ಯೆ ಮಾಡಿಕೊಂಡಿರುವ ಹೋಟೆಲ್ ಉದ್ಯಮಿಯಾಗಿದ್ದಾರೆ. ಕಳೆದ 7 ವರ್ಷಗಳಿಂದ ರಾಜ್ ಹೋಟೆಲ್ ನಲ್ಲಿ ಪಾಲುದಾರರಾಗಿದ್ದರು.ಲಾಕ್ ಡೌನ್ ನಿಂದಾಗಿ ಕಳೆದ 4 ತಿಂಗಳಿನಿಂದ ಹೋಟೆಲ್ ಬಂದ್ ಆಗಿದ್ದು ಡಿಪ್ರೆಶನ್ ನಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ . ನಿನ್ನೆ ಬೆಳಿಗ್ಗೆ ಹೋಟೆಲ್ ಕಾರ್ಮಿಕನೊಬ್ಬ ಹೋಟೆಲ್ ತೆರೆದಾಗ ನೇಣುಬಿಗಿದುಕೊಂಡು ಆತ್ಮಹತ್ಯೆಗೈದಿರುವ ಘಟನೆ ಕಂಡುಬಂದಿದೆ.ಮೃತರು ಈ ಬಗ್ಗೆ ಡೆತ್ ನೋಟ್ ನ್ನು ಬರೆದಿಟ್ಟಿದ್ದು “ಲಾಕ್ ಡೌನ್ ನಿಂದಾಗಿ ಹೋಟೆಲ್ ಬಂದ್ ಆಗಿದ್ದು ಪರಿಸ್ಥಿತಿ ಹದಗೆಟ್ಟಿದ್ದು ತೀವ್ರ ಡಿಪ್ರೆಶನ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ.ನಾನು ಸ್ವತಃ ಇಚ್ಚೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ “ಎಂದು ಬರೆಯಲಾಗಿದೆ. ಪುಣೆಯ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ಸಂದರ್ಭದಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದು ಆತಂಕದ ವಿಷಯವಾಗಿದೆ.ಕಳೆದ ಒಂದು ವಾರದಲ್ಲೇ ನಗರದಲ್ಲಿ ಅಲ್ಲಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇದೆ.
