ಮಂಗಳೂರು (ಜೂನ್26):- ಪಿಲಿಕುಳ ಜೈವಿಕ ಉದ್ಯಾವನದ ಪ್ರಾಣಿ ಸಂಗ್ರಹಾಲಯಕ್ಕೆ ನಿನ್ನೆ ತಡರಾತ್ರಿ ಬೀದಿ ನಾಯಿಗಳು ದಾಳಿ ಮಾಡಿದೆ. ಬೀದಿ ನಾಯಿಗಳ ದಾಳಿಗೆ ಹತ್ತು ಕಾಡು ಕುರಿಗಳು ಸಾವನ್ನಪ್ಪಿದ್ದು, 5 ಗಂಭೀರ ಗಾಯಗೊಂಡಿದೆ. ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು,ಪಿಲಿಕುಳದ ಸಮೀಪವಿರುವ ವಾಮಂಜೂರು ಡಂಪಿಂಗ್ ಯಾರ್ಡ್ ನಿಂದ ಹತ್ತಿರವಿರುವ ಪಿಲಿಕುಳಕ್ಕೆ ಬೀದಿ ನಾಯಿಗಳು ದಾಳಿ ನಡೆಸಿದೆ.  ಗಂಭೀರ ಗಾಯಗೊಂಡ 5 ಕಾಡು ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವುಗಳು ಚೇತರಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾ ಲಾಕ್ ಡೌನ್ ಸಂದರ್ಭ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಪ್ರವೇಶಕ್ಕೆ ನಿರ್ಭಂಧ ಹೇರಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಬೇರೆ ಮೃಗಾಲಯಕ್ಕೆ ಕುರಿಗಳು ವಿನಿಮಯವಾಗುವ ಹಂತದಲ್ಲಿತ್ತು, ಈಗ 30 ಕಾಡು ಕುರಿಗಳಲ್ಲಿ 10 ಕುರಿಗಳು ಸಾವನ್ನಪ್ಪಿದ್ದು, ಉದ್ಯಾನವನದ ಭದ್ರತೆಯ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಎದ್ದಿದೆ.