ಪುತ್ತೂರು: ಗೋಣಿಕೊಪ್ಪಲ್ ಕಾವೇರಿ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗವು ಮಾರ್ಚ್ 25 ರಂದು ಆಯೋಜಿಸಿದ ರಾಜ್ಯ ಮಟ್ಟದ ಅರ್ಥಶಾಸ್ತ್ರ ಸ್ಪರ್ಧೋತ್ಸವ ಇಕೋವಿಸ್ತ-2019 ಇದರಲ್ಲಿ ಭಾಗವಹಿಸಿದ ಸಂತ ಫಿಲೋಮಿನಾ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳ ತಂಡವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.
ಈ ಸ್ಪರ್ಧೋತ್ಸವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ವಿಲ್ಮಾ ಮರಿಯ ಪಾಯಸ್, ಶ್ರಾವ್ಯ, ಪ್ರೀತಿಕಾ, ರೂಪ, ನಿಶ್ಮಿತಾ, ಸುಪ್ರಿತಾ, ನರೇಶ್, ವಿನೀತ್ ಕುಮಾರ್, ಶುಭ ಕೆ, ಹರಿಣಾಕ್ಷಿ, ಅಶ್ವಿನಿ ಕೆ, ರಂಜಿತಾ, ಸಫ್ವಾನಾ ತಸ್ನಿಮಾ, ಅಬ್ದುಲ್ ಬಾಸಿತ್, ಜೀವನ್ ವಿಕಾಸ್, ಚೇತನ್, ಸಂಧ್ಯಾರಾಣಿ, ಬಿಜೇಶ್ ಮತ್ತು ನೆಫಿಸತುಲ್ ಮಿಶ್ರಿಯಾ ಭಾಗವಹಿಸಿ, ಜಾನಪದ ಸಮೂಹ ನೃತ್ಯ ಮತ್ತು ಟ್ರೆಸರ್ ಹಂಟ್‍ನಲ್ಲಿ ಪ್ರಥಮ, ಕ್ವಿಜ್ ಮತ್ತು ಪ್ರಹಸನದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಧುಸೂದನ್ ಎನ್ ಈ ಸ್ಪರ್ಧಾ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು.