ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿಗಳ ತಂಡವು ಈ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ.
ವಿವೇಕಾನಂದ ಕಾಲೇಜಿನಲ್ಲಿ ಜರಗಿದ ‘ಶೋಧನಾ’ ರಾಷ್ಟ್ರೀಯ ಮಟ್ಟದ ಕಾಮರ್ಸ್ ಅಂಡ್ ಮ್ಯಾನೆಜ್‍ಮೆಂಟ್ ಸ್ಪರ್ಧೆಯ ರಸಪ್ರಶ್ನೆ ವಿಭಾಗದಲ್ಲಿ ಡೇನಿಯಲ್ ಬಿ ಪಿರೇರಾ ಮತ್ತು ಅಖಿಲೇಶ್ ಡಿ ಬಿ ಭಾಗವಹಿಸಿ, ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಸುಳ್ಯದ ಎನ್‍ಎಮ್‍ಸಿಯಲ್ಲಿ ಜರಗಿದ ‘ಅದ್ವಿಕಾ’ ರಾಷ್ಟ್ರೀಯ ಮಟ್ಟದ ಕಾಮರ್ಸ್ ಅಂಡ್ ಮ್ಯಾನೆಜ್‍ಮೆಂಟ್ ಸ್ಪರ್ಧೆಯ ರಸಪ್ರಶ್ನೆ ವಿಭಾಗದಲ್ಲಿ ಡೇನಿಯಲ್ ಬಿ ಪಿರೇರಾ ಮತ್ತು ಸೋನಿ ತೆರೆಸಾ ಇವರ ತಂಡವು ಪ್ರಥಮ ಸ್ಥಾನ ಹಾಗೂ ರೋಶನಿ ಎಮ್ ವೈ ಇವರು ಬೆಸ್ಟ್ ಮ್ಯಾನೇಜರ್ ಆಗಿ ಮೂಡಿ ಬರುವ ಮೂಲಕ ಕಾಲೇಜಿನ ತಂಡವು ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ.
ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ಆಯೋಜಿಸಿದ ರಾಷ್ಟ್ರೀಯ ಮಟ್ಟದ ಮ್ಯಾನೆಜ್‍ಮೆಂಟ್ ಫೆಸ್ಟ್ ‘ಫಿಲೋ ವೆಂಚುರಾ’ದ ಮಾರ್ಕೆಟಿಂಗ್ ವಿಭಾಗದಲ್ಲಿ ಜೀವಿತ್ ಸಿಕ್ವೇರಾ, ಲೋಯ್ಡ್ ಜೋಯ್‍ಸ್ಟನ್ ಮತ್ತು ಲಿಸ್ಟನ್ ಜೋಯ್ ಮಾರ್ಟಿಸ್ ಪ್ರಥಮ ಸ್ಥಾನ, ರಸಪ್ರಸ್ನೆಯಲ್ಲಿ ಡೇನಿಯಲ್ ಮತ್ತು ಸೋನಿ ತೆರೆಸಾ ಪ್ರಥಮ ಬಹುಮಾನ ಗಳಿಸಿ, ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಿಬಿಎ ವಿದ್ಯಾರ್ಥಿಗಳ ಈ ಅಪ್ರತಿಮ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮತ್ತು ವಿಭಾಗ ಮುಖ್ಯಸ್ಥ ರಾಧಾಕೃಷ್ಣ ಗೌಡ ಅಭಿನಂದನೆ ಸಲ್ಲಿಸಿರುತ್ತಾರೆ. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ, ಪುಷ್ಪ ಎನ್, ಅಭಿಷೇಕ್ ಸುವರ್ಣ ಮತ್ತು ಹರ್ಷಿತ್ ಆರ್ ಮಾರ್ಗದರ್ಶನ ನೀಡಿರುತ್ತಾರೆ.