ಧರ್ಮಸ್ಥಳ: ಏಪ್ರೀಲ್ 01 ರಂದೇ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡುವ ಸಂಪ್ರದಾಯವು ಕಳೆದ ಮೂವತ್ತೇಳು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ರೀತಿಯಲ್ಲಿ ಉಜಿರೆ ರುಡ್‍ಸೆಟ್‍ನ 2018-19 ರ ಸಾಲಿನ ವಾರ್ಷಿಕ ವರದಿಯನ್ನು ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪದ್ಮವಿಭೂಷಣ 

ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರುಡ್‍ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೆಶಕರಾದ ಶ್ರೀ ಎಮ್.ಜನಾರ್ಧನ್‍ರವರು,

 ಸಂಸ್ಥೆಯ ನಿರ್ದೆಶಕರಾದ  ವಿನಯ್ ಕುಮಾರ್ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು. 2018-19 ರ ಸಾಲಿನಲ್ಲಿ 29 ವಿವಿಧÀ ತರಬೇತಿ ಕಾರ್ಯಕ್ರಮಗಳಲ್ಲಿ 756 ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿ ಶೇ.74 ಶಿಭಿರಾರ್ಥಿಗಳನ್ನು ಸ್ವ ಉದ್ಯೋಗಿಗಳನ್ನಾಗಿ 

ಹೊರತರುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ. ಮುಂದಿನ ವರ್ಷದಲ್ಲೂ ಸ್ಥಳೀಯವಾಗಿ ಬೇಡಿಕೆ ಆಧಾರಿತ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಅಯೋಜಿಸುವಂತೆ ಶುಭ ಹಾರೈಸಿದರು ಜೊತೆಗೆ ಕರ್ನಾಟಕದಲ್ಲಿರುವ ಇತರ 06 ರುಡ್‍ಸೆಟ್ ಸಂಸ್ಥೆಗಳಾದ ಬ್ರಹ್ಮಾವರ, ಚಿತ್ರದುರ್ಗ, ಧಾರವಾಡ, 

ವಿಜಯಪುರ, ಮೈಸೂರು, ಬೆಂಗಳೂರು ಹಾಗು ಕಣ್ಣೂರು ಶಾಖೆಯ 2018-19 ರ ಸಾಲಿನ ವಾರ್ಷಿಕ ವರದಿಗಳನ್ನು ಕೂಡ ಧರ್ಮಸ್ಥಳದಲ್ಲಿ ಇಂದು ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಸಂಸ್ಥೆಗಳ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ರುಡ್‍ಸೆಟ್‍ನಲ್ಲಿ ನಡೆಯುವ ಉಚಿತ ತರಬೇತಿಗಳ:

ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್‍ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಉಜಿರೆಯ ರುಡ್‍ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ನಡೆಯುವ ತರಬೇತಿಗಳ ವಿವರಗಳು:

ಇಲೆಕ್ಟ್ರೀಕಲ್ ಮೋಟಾರ್ ರಿವೈಂಡಿಂಗ್ 30 ದಿನಗಳು. 04.04.2019 ರಿಂದ 03.05.2019 ರವರೆಗೆ ಕಂಪ್ಯೂಟರೈಸ್‍ಡ್ ಎಕೌಂಟಿಂಗ್ 30 ದಿನಗಳು 10.04.2019 ರಿಂದ 09.05.2019 ರವರೆಗೆ
ಮೊದಲಾದ ತರಬೇತಿಗಳನ್ನು ಆಯೋಜಿಸಲಾಗಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳು ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್‍ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ online ವೆಬ್‍ಸೈಟ್ ಮೂಲಕ www.rudsetujire.com ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು