ಮಂಗಳೂರು ಏಪ್ರಿಲ್ 1 : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ವಿಜಯಾ ಬ್ಯಾಂಕ್ - ಬ್ಯಾಂಕ್ ಆಫ಼್ ಬರೋಡಾ ಜೊತೆ ವಿಲೀನದ ವಿರುದ್ಧವಾಗಿ ಹಾಗೂ ಈ ವಿಲೀನವನ್ನು ವಿರೋದಿಸುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಸಮರ್ಪಕತೆಯನ್ನು ಖಂಡಿಸಿ "ಕರಾಳ ದಿನ"
ಆಚರಿಸಲಾಯಿತು. ಈ ಸಂರ್ಭದಲ್ಲಿ ಮಾತನಾಡಿದ ಮಿಥುನ್ ರೈ ವಿಜಯಾ ಬ್ಯಾಂಕ್ ಕರಾವಳಿಯ ಹೆಮ್ಮೆಯ ಬ್ಯಾಂಕ್ , ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಬ್ಯಾಂಕ್ , ಗುಜರಾತ್ ಮೂಲದ ಬ್ಯಾಂಕ್ ಆಫ಼್ ಬರೋಡಾದೊಂದಿಗೆ ವಿಲೀನ ಮಾಡುವ ಸಂಧರ್ಭದಲ್ಲಿ ನಮ್ಮ ಜಿಲ್ಲೆಯ ಸಂಸದರು ಸಂಸತ್ತಿನಲ್ಲಿ ಯಾವುದೆ ಮಾತನಾಡದಿರುವುದು ನಮ್ಮ ಜಿಲ್ಲೆಯ ದುರಂತ.