ಬಂಟ್ವಾಳ : ರಾಮನಗರ ತುಂಬೆ ಎಸ್.ವಿ.ಎಸ್ ಕಾಲೇಜು ರಸ್ತೆ ಬ.ಕಸ್ಬಾ ಎಂಬಲ್ಲಿ 1927ನೇ ಇಸವಿಯಿಂದ ಶ್ರೀ ರಾಮನ ಭಕ್ತರು ಸೇರಿಕೊಂಡು ರಾಮನವಮಿ ಉತ್ಸವ, ಪ್ರತಿ ಶನಿವಾರ ಭಜನೆ, ಏಳು ದಿನದ ನಗರ ಭಜನೆ ಮತ್ತು ಇತರ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ರಾಮ ಮಂದಿರ ನಿರ್ಮಿಸಿ ನಡೆಸಿಕೊಂಡು ಬರುತ್ತಿದ್ದು ಸದ್ರಿ ಈ ಭಜನಾ ಮಂದಿರವನ್ನು ಅಭಿವೃದ್ಧಿ ಪಡಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಿಕೊಂಡು ಶ್ರೀ ರಾಮ ಭಜನಾ ಸೇವಾ ಟ್ರಸ್ಟ್ ನ್ನು ನೋಂದಾವಣೆಯಾಗಿರುತ್ತದೆ. ಟ್ರಸ್ಟ್ ನ ಅಧ್ಯಕ್ಷರಾಗಿ ನಾಗೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಕೃತಿಕ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್ ಜತೆ ಕಾರ್ಯದರ್ಶಿ ಗಳಾಗಿ ಸೋಮನಾಥ ಸಾಲ್ಯಾನ್ , ರತ್ನಾಕರ ಮೂಲ್ಯ, ಉದಯಕುಮಾರ್, ಜಗನ್ನಾಥ ಶೆಟ್ಟಿ, ಕೋಶಾಧಿಕಾರಿಯಾಗಿ ತಿಮ್ಮಯ ಶೆಟ್ಟಿ, ಸದಸ್ಯರಾಗಿ ಗಣೇಶ್ ಶೆಟ್ಟಿ, ಹರೀಶ್ ,ದಿನೇಶ್ ಆಯ್ಕೆಯಾಗಿರುತ್ತಾರೆ.