ಬಳ್ಳಾರಿ : ದಿನಾಂಕ 14/5/2020 ರಂದು ಬೆಳ್ಳಗೆ 11ಗಂಟೆ ಕ್ಯಾಥೋಲಿಕ್ ಡಯಾಸಿಸ್ ಆಫ್ ಬಳ್ಳಾರಿ, ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ‘ಕರೋನ ಸೊಂಕು ನಿವಾರಣೆಗಾಗಿ ಜಾಗತಿಕ ಪ್ರಾರ್ಥನಾ ಮತ್ತು ಉಪವಾಸ’ ಆಚರಣೆಯ ಮಹತ್ವವನ್ನು ವಿವರಿಸುತ್ತಾ ಫಾ|| ಐವನ್ ಪಿಂಟೊರವರು ತಮ್ಮ ಪ್ರಾಸ್ತವಿಕ ನುಡಿಗಳಲ್ಲಿ ಕೊರೊನಾ ಮಹಾಮಾರಿ ಜಗತ್ತಿನಾದ್ಯಂತ ಹರಡಿದ ಮಹಾಮಾರಿ. ಮಾನವಕುಲದ ಜೀವನವನ್ನು ಅಸ್ತವ್ಯಸ್ತಗೊಳಿಸಿದ ಸೋಂಕು. ಇದ್ದರಿಂದ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ.  ಮಿಲಿಯಾಂತರ ಮಂದಿ ಆಸ್ಪತ್ರೆಗಳಲ್ಲಿ ನರಳಾಡುತ್ತಿದ್ದಾರೆ.  ಈ ಸಂದರ್ಭದಲ್ಲಿ ವಿಶ್ವ ಗುರು ಪೋಪ್ ಫ್ರಾನ್ಸಿಸ್ ಇವರು ಮತ್ತು  ಮಾನವ ಐಕ್ಯಮತ್ಯದ ಉನ್ನತ ಸಮಿತಿ(higher committee of Human Fraternity (HCHF) ಇವರು ಮೇ 14ರಂದು ಜಾಗತಿಕ ಪ್ರಾರ್ಥನೆ ಮತ್ತು ಉಪವಾಸ ದಿನವನ್ನಾಗಿ ಆಚರಿಸಲು ಕರೆಯನ್ನು ನೀಡಿದ್ದಾರೆ. ಮನುಕುಲವನ್ನು ಆವರಿಸಿಕೊಂಡಿರುವ ಕೊರೊನ ವೈರಸ್ ಎಂಬ ರೋಗವನ್ನು ದೇವರ ಕೃಪೆಯಿಂದ ವಿನಾಶಗೊಳಿಸಲು ಪ್ರಾರ್ಥನೆ ಮತ್ತು ಉಪವಾಸ ದಿನವನ್ನಾಗಿ ಆಚರಿಸಲು ನಾವಿಂದು ಇಲ್ಲಿ ಸೇರಿದ್ದೇವೆ. ಊಅಊಈನ ಕಾರ್ಯದರ್ಶಿ ನ್ಯಾಯಾದೀಶರಾದ ಮಾನ್ಯ ಶ್ರೀ ಮಹಮ್ಮದ್ ಅಬ್ದೆಲ್ ಸಲಾಂರವರು ಹೇಳುವ ಪ್ರಕಾರ,  “ಈ ಪ್ರಾರ್ಥನೆಯ ಮಹತ್ವದ ಕರೆಯ ಫ್ರತಿಫಲವಾಗಿ ಇಡೀ ಪ್ರಪಂಚದ ನಾಯಕರು ಮತ್ತು ಜನಸಾಮಾನ್ಯರು ಈ ಮಾನವ ಐಕ್ಯಮತ್ಯಕ್ಕೆ  ನಿಜವಾದ ಸಾಕ್ಷಿಯಾಗಲಿ ಮತ್ತು ಭರವಸೆಯ ಆಶಾಕಿರಣವನ್ನು ಸಾಧಿಸಲು ಪ್ರಾಪಂಚಿಕ ಐಕ್ಯತೆಯ ತಳಹದಿಯಾದ ಮಾನವ ಭ್ರಾತೃತ್ವ, ತತ್ವಗಳು, ಸುರಕ್ಷತೆ, ಭದ್ರತೆ, ಸಹೋದರತ್ವ ಮತ್ತು ಮನುಕುಲದ ಆರೋಗ್ಯವನ್ನು ಕಾಪಾಡಲು ಆ ಭಗವಂತನು ನಮ್ಮ ಮೇಲೆ ಕೃಪಾರ್ಶೀವಾದದೊಂದಿಗೆ ಕರುಣೆ ತೋರುತ್ತಾರೆ” ಎಂಬ ನಂಬಿಕೆಯಿಂದ ಕೋಟ್ಯಾಂತರ ಭಕ್ತಾಧಿಗಳು ಈ ಹೆಮ್ಮಾರಿ, ಮಹಾಮಾರಿ ಸಾಂಕ್ರಾಮಿಕ ಸರ್ವವ್ಯಾಪಿ ರೋಗವನ್ನು ಮುಕ್ತಗೊಳಿಸಲಿ ಎಂದು ಒಟ್ಟಾಗಿ ಪ್ರಾರ್ಥಿಸಲು ದೇವರೇ ನಮಗೆ ಕೊಟ್ಟ ಒಂದು ದೊಡ್ಡ ವರದಾನ. ಈ ಜಾಗತಿಕ ಕರೆಗೆ ಓಗೊಟ್ಟು ಈ ಸರ್ವ ಧರ್ಮ ಪ್ರಾರ್ಥನೆಯ ಸಭೆಯನ್ನು ಇಂದು ನಾವು ನಡೆಸುತ್ತಿದ್ದೇವೆ ಎಂದು ವಿವರಿಸಿದರು.

ಪರಮ ಪೂಜ್ಯ ಧರ್ಮಾದ್ಯಕ್ಷರಾದ ಹೆನ್ರಿ ಡಿ’ಸೋಜರವರು ಬೈಬಲ್ ಗ್ರಂಥದ ಪವಿತ್ರ ನುಡಿಗಳನ್ನು ಪಠಿಸುತ್ತಾ ದೇವರಲ್ಲಿ ದೃಢ ವಿಶ್ವಾಸವನ್ನು ಹೆಚ್ಚಿಸಿ ಸೋಂಕಿನಿಂದ ಪ್ರಭಾವಿತರಾದವರಿಗೆ ಅಗತ್ಯವಾದ ಸೇವೆ, ಪರಿಹಾರ ಹಾಗೂ ಉಪಶಮನ ನೀಡುವುದರ ಮೂಲಕ ಸಮಾಜದಲ್ಲಿ ಸಹಕಾರ ಹೆಚ್ಚಿಸಿ ಸಹೋದರತ್ವತೆಯಿಂದ ಜೀವಿಸಬೇಕೆಂದು ಕರೆಯನ್ನಿತ್ತರು.

ಶ್ರೀ,ಶ್ರೀ,ಶ್ರೀ ಕಲ್ಯಾಣ ಸ್ವಾಮಿಜಿಯವರು ವಚನ ಸಾಹಿತ್ಯ ಪಠಿಸುತ್ತಾ ನಮ್ಮಲ್ಲಿ ಹೆಚ್ಚಿನ ಶಿಸ್ತು, ಸಹಕಾರ, ಸಂಯಮ ಬರಬೇಕು ಇದಕ್ಕಾಗಿ ಭಗವಂತನಲ್ಲಿ ನಾವು ಪ್ರಾರ್ಥಿಸಬೇಕೆಂದು ಕರೆಯನ್ನುಯಿತ್ತರು.

ಬಳ್ಳಾರಿ ಜಿಲ್ಲೆಯ ಖಾಝೀಯವರಾದ ಸಿದ್ದಿಕಿ ಮೊಹಮಿತ್‍ರವರು ಕುರಾನಿನ ಪವಿತ್ರ ವಾಕ್ಯಗಳನ್ನು ಪಠಿಸುತ್ತಾ ಅಲ್ಲಾ ದೇವರನ್ನು ಸಂತೋಷಗೊಳಿಸಿದಾಗ ನಮ್ಮ ಪಾಪವನ್ನು ಕ್ಷಮಿಸಿ ಕರುಣಾಪುರಿತಾ ಆರ್ಶೀವಾದದ ಸುರಿಮಳೆಗೈಯುತ್ತಾರೆ.  ನೆಕರೆಯವರಿಗೆ ಸಹಾಯ ಮಾಡುವುದು ಮಾನವ ಧರ್ಮಾದ ಗುಣವಾಗಿದೆ ಆದ್ದರಿಂದ ಪರಸ್ಪರ ಸಹಾಯದ ಹಸ್ತ ನೀಡಲು ಕರೆಯನಿತ್ತರು.

ಬ್ರಹ್ಮ ಕುಮಾರಿ ಸಮಾಜದ ಮುಖ್ಯಸ್ಥರಾದ ನಿರ್ಮಲರವರು ಸನಾತನ ಭಗವತ್ ಗೀತಾ ಪವಿತ್ರ ಗ್ರಂಥವನ್ನು ಪಠಿಸುತ್ತಾ ಕರೋನ ನಮ್ಮ ಕುಟುಂಬ ಮತ್ತು ಸಮಾಜದಲ್ಲಿ ಪ್ರತ್ಯಾತ್ಮಕ ಬದಲಾವಣೆಯನ್ನು ತಂದದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾ ಮನುಕುಲವು ಸಕಾರತ್ಮಕವಾಗಿ ಬೆಳೆಯ ಬೇಕು. ನಮಲ್ಲಿದ್ದ  ನಕಾರತ್ಮಕ ಮನೋಭಾವವನ್ನು ತ್ಯಜಿಸಿದ್ದಲ್ಲಿ ದೇವರ ಕೃಪಗೆ ಒಳಗಾಗುತ್ತೇವೆ  ಎಂದು ನುಡಿದರು.

ಜೈನ ಧವರ್iದ ನಾಯಕರಾದ ಶ್ರೀ ಬಸಂತರವರು ಆಗಮ ಪವಿತ್ರ ಗ್ರಂಥÀದ ಪಠಣೆಯನ್ನು ಮಾಡಿ ಭಗವನ ಮಹಾವೀರ ಭೋದಿಸಿದಂತೆ ನಮ್ಮ ಸಂಕಲ್ಪ ಮತ್ತು ಸಂಯಮದಿಂದ ಜೀವಿಸಬೇಕಾದರೆ ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಡಬೇಕು. ಬ್ರಹ್ಮಾಂಡ ನಮ್ಮ ಆಸ್ತಿ ಅಲ್ಲ. ನಮ್ಮ ಕ್ಞಣಿಕ ಜೀವನದಲ್ಲಿ ಬ್ರಹ್ಮಾಂಡದ ಕೃಪಾ ಆರ್ಶೀವಾದಗಳನ್ನು ಪಡೆದು ಇತರರಲ್ಲಿ ಹಂಚುವುದೇ ಜೀವನ ಎಂದರು.

ಪಾಸ್ಟಾರ್ ಪ್ರಭಕಾರವರು ಪ್ರಾರ್ಥಿಸುತ್ತಾ ಸರ್ವಧರ್ಮ ಕುಟುಂಬವು ಒಂದಾಗಿ ಸರ್ವವ್ಯಾಪಿ ಕರೋನವನ್ನು ಹೋಗಲಾಡಿಸಲು ಭಗವಂತನು ದಯಪಾಲಿಸಿದ ಸುಮಧುರಗಳಿಗೆಗಾಗಿ ಕೃತಜ್ಞತೆಯನ್ನು ಸಲ್ಲಿಸಿ ಇಡೀ ವಿಶ್ವವದಿಂದ ಸಾಂಕ್ರಮಿಕ ರೋಗ ಮಾಯವಾಗಲಿ, ಹಾಗೂ ಇದ್ದಾಕ್ಕಾಗಿ ದುಡಿಯುವ ಸರ್ಕಾರ ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ, ಮಂತ್ರಿಮಂಡಲ, ಅಧಿಕಾರ ವರ್ಗದವರಿಗೂ ಸಂಕ್ರಾಮಿಕÀ ರೋಗದ ವಿರುದ್ಧ ಹೋರಾಡುವ ಎಲ್ಲಾರಿಗೂ ದೇವರು ಹೇರಳವಾಗಿ ಆರ್ಶೀವಾದಿಸಲಿಯೆಂದು ಶುಭ ಕೋರಿದರು.

ಕೊನೆಯದಾಗಿ ವಿವಿಧ ಧವರ್iಗಳ ನಾಯಕರು ಒಟ್ಟಾಗಿ ಸಹಕರಿಸಿ ಕರೋನ ಸೊಂಕು ಪ್ರಭಾವಿತರಾದವರಿಗೆ ಪರಿಹಾರ ನೀಡುವ ಕಾರ್ಯವನ್ನು ಹಮ್ಮಿ ಕೊಳ್ಳಲು ನಿರ್ಧರಿಸಲಾಯಿತು.