ಉಡುಪಿ,(ಡಿಸೆಂಬರ್ 16): ಪ್ರಸಕ್ತ ಸಾಲಿನಲ್ಲಿ ಸಮಗ್ರ ಶಿಕ್ಷಣ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಾಥಮಿಕ /  ಪ್ರೌಢ ಶಾಲಾ ಹಂತದ ಖಾಲಿ ಇರುವ ಬಿ.ಐ.ಇ.ಆರ್.ಟಿ ಹುದ್ದೆಗಳನ್ನು ಬಾಹ್ಯ ಮೂಲದಿಂದ ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ವಿಕಲಚೇತನ ಮಕ್ಕಳ ಬೋಧನೆಗಾಗಿ ವಿಶೇಷ ಬಿ.ಎಡ್ / ಡಿಎಡ್ ಪದವಿ ಪಡೆದಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ  ಆಹ್ವಾನಿಸಲಾಗಿದೆ.

     ಅರ್ಜಿ ಸಲ್ಲಿಸಲು ಡಿಸೆಂಬರ್ 22 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವoತೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.