ಮಂಗಳೂರು : ಭಾರತೀಯ ಅಂಚೆ ಇಲಾಖೆಯ ವತಿಯಿಂದ " ಫಿಲಾಟೆಲಿ "( ಅಂಚೆ ಚೀಟಿ ಸಂಗ್ರಹಣೆ ) ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ 6 ನೇ ತರಗತಿಯಿಂದ 9 ನೇ ತರಗತಿಗಳಲ್ಲಿ ಓದುತ್ತಿರುವ ಶಾಲಾ ವಿಧ್ಯಾರ್ಥಿಗಳಿಗೆ ಘೋಷಿಸಲಾದ ದೀನ್ ದಯಾಳ್ ಸ್ಪರ್ಶ್ ಯೋಜನೆ ಸ್ಕಾಲರ್ ಶಿಪ್‍ಗಾಗಿ ಅರ್ಜಿಯನ್ನು  ಆಹ್ವಾನಿಸಲಾಗಿದೆ.

ಅರ್ಜಿಗಳನ್ನು  ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು - 575002 ಇವರಿಗೆ ತಲುಪುವಂತೆ ಸೆಪ್ಟೆಂಬರ್ 5 ರೊಳಗಾಗಿ ಕಳುಹಿಸಬೇಕು. ಶೇಕಡಾ 60ಕ್ಕಿಂತ ಅಧಿಕ ಅಂಕಗಳನ್ನು(2018-19)ಗಳಿಸಿದ್ದು ಫಿಲಾಟೆಲಿ ಖಾತೆ ಅಥವಾ ಶಾಲಾ ಫಿಲಾಟೆಲಿ ಕ್ಲಬ್ ಸದಸ್ಯರಾಗಿರೋ ವಿದ್ಯಾರ್ಥಿಗಳು  ಅರ್ಹರಾಗಿರುತ್ತಾರೆ.

ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್: www.karnatakapost.gov.in ಸಂಪರ್ಕಿಸಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ