ಮಂಗಳೂರು : 2019-20ನೇ ಸಾಲಿಗೆ ಎಸ್‍ಸಿಪಿ & ಟಿಎಸ್‍ಪಿ ಅನುದಾನದಡಿ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 800 ಹಾಸಿಗೆಯುಳ್ಳ ಎನ್.ಎ.ಬಿ.ಹೆಚ್ ಮಾನ್ಯತೆ ಪಡೆದಿರುವ ಆಸ್ಪತ್ರೆಗಳಲ್ಲಿ ಕನಿಷ್ಠ 75% ಹುದ್ದೆಗಳನ್ನು ಮೀಸಲಿರಿಸುವ ಭರವಸೆಯ ಮೇರೆಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು 18 ವರ್ಷದಿಂದ 35 ವರ್ಷದ ಅಭ್ಯರ್ಥಿಗಳನ್ನು  ಆಯ್ಕೆ ಮಾಡಲು  ಸೆಪ್ಟೆಂಬರ್ 20 ರಂದು ನಗರದ ಪುರಭವನ ಮಿನಿ  ಸಭಾಂಗಣದಲ್ಲಿ  ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.